ಆ್ಯಂಬುಲೆನ್ಸ್ ಢಿಕ್ಕಿ: ಭದ್ರತಾ ಸಿಬ್ಬಂದಿ ಮೃತ್ಯು
Update: 2020-03-20 22:23 IST
ಬೆಂಗಳೂರು, ಮಾ.20: ಆ್ಯಂಬುಲೆನ್ಸ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಭದ್ರತಾ ಸಿಬ್ಬಂದಿಯೋರ್ವ ಮೃತಪಟ್ಟಿರುವ ಘಟನೆ ಇಲ್ಲಿನ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಸ್ಸಾಂ ಮೂಲದ ಬಿಕ್ರಮ್(28) ಮೃತ ಭದ್ರತಾ ಸಿಬ್ಬಂದಿ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಸಂಜೆ ಯಲಹಂಕದ ಸರ್ವಿಸ್ ರಸ್ತೆಯಲ್ಲಿ ಸೈಕಲ್ ನಲ್ಲಿ ತೆರಳುತ್ತಿದ್ದಾಗ ದೇವನಹಳ್ಳಿ ಕಡೆ ಮಾರ್ಗದಿಂದ ಬಂದ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ ಬಿಕ್ರಮ್‌ಗೆ ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಯಲಹಂಕ ಸಂಚಾರ ಠಾಣಾ ಪೊಲೀಸರು, ಆರೋಪಿ ಚಾಲಕನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.