ಫ್ಯಾಕ್ಟ್ ಚೆಕ್: ಕೊರೋನಾವೈರಸ್ ನಾಶಕ್ಕೆ ಹೆಲಿಕಾಪ್ಟರ್ ನಲ್ಲಿ ಔಷಧಿ ಸಿಂಪಡಣೆ ಎಂಬ ಸಂದೇಶ ಸುಳ್ಳು

Update: 2020-03-21 08:08 GMT

ಹೊಸದಿಲ್ಲಿ: ಕೊರೋನಾವೈರಸ್ ಅನ್ನು ನಾಶಪಡಿಸಲು ಸರಕಾರ  ಔಷಧಿ ಸಿಂಪಡಿಸಲಿದೆಯೆಂಬ ವಾಟ್ಸ್ಯಾಪ್ ಸಂದೇಶ ಹಲವರಿಗೆ ಬಂದಿರಬಹುದು. ಹಲವರು ಈ ಸಂದೇಶವನ್ನು ನಂಬಿರಲೂಬಹುದು, ಆದರೆ  ಎಚ್ಚರಿಕೆಯಿಂದಿರಿ, ಈ ಸಂದೇಶ ಸುಳ್ಳು.

"ಇಂದು ರಾತ್ರಿ 10 ಗಂಟೆಯಿಂದ ನಾಳೆ ಬೆಳಿಗ್ಗೆ 5 ಗಂಟೆ ತನಕ ಮನೆಯಿಂದ ಹೊರ ಬರಬಾರದೆಂಬ ಮನವಿ. ಕೋವಿಡ್-19 ನಾಶಪಡಿಸಲು ಗಾಳಿಯಲ್ಲಿ ಔಷಧಿ ಸಿಂಪಡಿಸಲಿದ್ದಾರೆ. ಈ ಮಾಹಿತಿಯನ್ನು ನಿಮ್ಮ ಬಂಧುಬಳಗ, ಕುಟುಂಬ ಹಾಗೂ ಸ್ನೇಹಿತರ ಜತೆ ಶೇರ್ ಮಾಡಿ.  ಹೆಲಿಕಾಪ್ಟರ್ ಮೂಲಕ ಸಿಂಪಡಣೆ'' ಎಂದು ಆ ಸಂದೇಶದಲ್ಲಿ ಬರೆಯಲಾಗಿದೆ. ಇಷ್ಟೇ ಅಲ್ಲದೆ ಹಲವು ಆಡಿಯೋ ಸಂದೇಶಗಳೂ ಕೂಡ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.

ಭಾರತ ಸರಕಾರದ ಪ್ರೆಸ್ ಇನ್ಫಾರ್ಮೇಶನ್ ಬ್ಯುರೋದ ಫ್ಯಾಕ್ಟ್ ಚೆಕ್ ಟ್ವಿಟ್ಟರ್ ಹ್ಯಾಂಡಲ್ ಈ  ಸಂದೇಶ ಸುಳ್ಳೆಂದು ಸಾಬೀತು ಪಡಿಸಿದೆ. "ಇಂತಹ ಯಾವುದೇ ಕ್ರಮವನ್ನು ಭಾರತ ಸರಕಾರ ಕೈಗೊಳ್ಳುತ್ತಿಲ್ಲ, ನಂಬಲರ್ಹ ಮೂಲಗಳಿಂದ ಮಾಹಿತಿ ಪಡೆಯಿರಿ, ಸುಳ್ಳು ಸುದ್ದಿಗಳನ್ನು ಉತ್ಪ್ರೇಕ್ಷಿಸಬೇಡಿ'' ಎಂದು ಅದು ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News