ಜನತಾ ಕರ್ಫ್ಯೂ ಬೆಂಬಲಿಸಿ: ಕೇಂದ್ರ ಸಚಿವ ಸದಾನಂದಗೌಡ

Update: 2020-03-21 16:41 GMT

ಬೆಂಗಳೂರು, ಮಾ. 21: ಕೊರೋನ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಪ್ರಧಾನಿ ಮೋದಿ ಕರೆ ನೀಡಿರುವಂತೆ ಎಲ್ಲರೂ ಸ್ಪಂದಿಸುವ ಮೂಲಕ ರಾಜ್ಯದ ಎಲ್ಲ ಜನತೆ ಸ್ವಯಂ ಪ್ರೇರಿತ ಜನತಾ ಕರ್ಫ್ಯೂ ಆಚರಿಸೋಣ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮನವಿ ಮಾಡಿದ್ದಾರೆ.

ಶನಿವಾರ ನಗರದಲ್ಲಿ ಮಾತನಾಡಿದ ಅವರು, ಸೋಂಕು ತಡೆಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಸಾರಿಗೆ ಸಿಬ್ಬಂದಿ ಪೊಲೀಸರು, ಸೈನಿಕರು, ಸರಕಾರಿ, ಅರೆ ಸರಕಾರಿ ನೌಕರರು, ಪೌರಕಾರ್ಮಿಕರು ಸೇರಿದಂತೆ ಲಕ್ಷಾಂತರ ಜನ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಮಾ.22ರ ಸಂಜೆ 5ಕ್ಕೆ ಎಲ್ಲರೂ ನಮ್ಮ ಮನೆಯಿಂದಲೇ 5 ನಿಮಿಷಗಳ ಕಾಲ ಚಪ್ಪಾಳೆ ತಟ್ಟಿ ಅವರಿಗೆಲ್ಲ ಕೃತಜ್ಞತೆ ಹೇಳೋಣ ಎಂದ ಅವರು, ರಾಜ್ಯ ಸರಕಾರಗಳು, ಸೋಂಕು ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾಗರಿಕ ಬಂಧುಗಳೇ, ಈ ಸೂಕ್ಷ್ಮ ಸಂದರ್ಭದಲ್ಲಿ ನಮ್ಮ ನಮ್ಮ ಜವಾಬ್ದಾರಿ ಹೆಚ್ಚಿದೆ ಎಂದು ತಿಳಿಸಿದರು.

ಕೊರೋನ ಸೋಂಕಿಗೆ ಈವರೆಗೆ ಯಾವುದೇ ಲಸಿಕೆ ಅಭಿವೃದ್ಧಿಪಡಿಸಿಲ್ಲ. ಹೀಗಾಗಿ ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಅನಗತ್ಯ ಸಂಚರಿಸಬೇಡಿ. ಸೂಕ್ತ ಮುನ್ನಚ್ಚರಿಕೆ ಕೈಗೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ಅಗತ್ಯ ವಸ್ತುಗಳು ಲಭ್ಯವಿದ್ದು, ವಂದತಿಗಳಿಗೆ ಕಿವಿಗೊಡಬೇಡಿ. ಭಯಬಿದ್ದು ಅನವಶ್ಯಕ ಖರೀದಿ, ದಾಸ್ತಾನು ಮಾಡಬೇಡಿ. ವಿಶ್ವವ್ಯಾಪಿಯಾಗಿರುವ ಕೊರೋನ ರೋಗವು ಭಾರತದ ಮೇಲೂ ಆರ್ಥಿಕ ದುಷ್ಪರಿಣಾಮ ಬೀರುವ ಸಾಧ್ಯತೆಗಳಿರುವುದರಿಂದ ಸೂಕ್ತ ಮುಂಜಾಗೃತ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News