'12 ಗಂಟೆಗಳಲ್ಲಿ ಕೊರೊನಾವೈರಸ್ ಸಾಯುತ್ತದೆ': ನಗೆಪಾಟಲಿಗೀಡಾದ ಸೋನು ನಿಗಮ್ 'ಸಂಶೋಧನೆ'!

Update: 2020-03-21 17:41 GMT

ಕೊರೊನಾವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ನಡುವೆಯೇ ಸುಳ್ಳು ಸುದ್ದಿಗಳೂ ಕೂಡ ಅಷ್ಟೇ ವೇಗವಾಗಿ ಹಬ್ಬುತ್ತಿದೆ. ಇಂತಹ ಸುಳ್ಳು ಸುದ್ದಿಯೊಂದನ್ನು ನಂಬಿ ಅದನ್ನು ವಿಡಿಯೋದಲ್ಲಿ ತಿಳಿಸಿದ ಖ್ಯಾತ ಗಾಯಕ ಸೋನು ನಿಗಮ್ ಈಗ ನಗೆಪಾಟಲಿಗೀಡಾಗಿದ್ದಾರೆ.

ದೇಶದಲ್ಲಿ ಕೊರೊನಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ರವಿವಾರ 'ಜನತಾ ಕರ್ಫ್ಯೂ'ಗೆ ಕರೆ ನೀಡಿದ್ದರು. ಪ್ರಧಾನಿಯ ಈ ಕರೆಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಸೆಲೆಬ್ರಿಟಿಗಳೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಪಟ್ಟಿಗೆ ಸೋನು ನಿಗಮ್ ಅವರೂ ಸೇರಿದ್ದು, ಪ್ರಧಾನಿಯನ್ನು ಹೊಗಳುವ ಭರದಲ್ಲಿ ಅವರು ಎಡವಟ್ಟು ಮಾಡಿಕೊಂಡು ನಗೆಪಾಟಲಿಗೀಡಾಗಿದ್ದಾರೆ.

ವಿಡಿಯೋ ಒಂದರಲ್ಲಿ ಮಾತನಾಡಿರುವ ಸೋನು ನಿಗಮ್, "ಜನತಾ ಕರ್ಫ್ಯೂ ನಡೆ ಭಾರತದ ಮಾಸ್ಟರ್ ಸ್ಟ್ರೋಕ್" ಎಂದಿದ್ದಾರೆ. 14 ಗಂಟೆಗಳ ಕರ್ಫ್ಯೂಗೆ ಪ್ರಧಾನಿ ಕರೆ ನೀಡಿದ್ದರೆ, ಸೋನು ಅವರು, 12 ಗಂಟೆಗಳಲ್ಲಿ ಕೊರೊನಾವೈರಸ್ ಸಾಯುತ್ತದೆ. ಇದು ಯಾವುದೇ ಕೊರೊನಾಪೀಡಿತ ರಾಷ್ಟ್ರಗಳು ಯೋಚಿಸದ ಮಾಸ್ಟರ್ ಸ್ಟ್ರೋಕ್  ಎಂದಿದ್ದಾರೆ. ಆದರೆ ಸೋನು ನಿಗಮ್ ಹೇಳಿದಂತೆ ವೈರಸ್ ಗಳು 12 ಗಂಟೆಗಳಲ್ಲಿ ಸಾಯುವುದಿಲ್ಲ.

ಪ್ಲಾಸ್ಟಿಕ್ ಮತ್ತು ಸ್ಟೀಲ್ ಗಳಲ್ಲಿ ಕೊರೊನಾವೈರಸ್ 3 ದಿನಗಳ ಕಾಲ ಬದುಕಿರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತದೆ. ಸೋನು ನಿಗಮ್ ಅವರ ಈ ಸುಳ್ಳು ಸುದ್ದಿಯನ್ನು ಹಲವು ಟ್ವಿಟರಿಗರು ಟೀಕಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News