ಚೀನಾ ಫುಟ್ಬಾಲ್ ಸ್ಟಾರ್ ವು ಲೀಗೆ ಕೊರೋನ ವೈರಸ್ ಲಕ್ಷಣ

Update: 2020-03-22 04:28 GMT

ಶಾಂಘೈ, ಮಾ.22: ಸ್ಪೇನ್‌ನ ಎಸ್ಪಾನಿಯೊಲ್ ಪರ ಆಡುತ್ತಿರುವ ಚೀನಾದ ಫುಟ್ಬಾಲ್ ಸ್ಟಾರ್ ವು ಲೀ ಕೊರೋನ ವೈರಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಚೀನಾ ಫುಟ್ಬಾಲ್ ಸಂಸ್ಥೆ(ಸಿಎಫ್‌ಎ)ಶನಿವಾರ ತಿಳಿಸಿದೆ.

‘‘ವು ಲೀಗೆ ಕೊರೋನ ವೈರಸ್‌ನ ಸೌಮ್ಯ ಲಕ್ಷಣ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಮಗೆ ಎಸ್ಪಾನಿಯೊಲ್ ಎಫ್‌ಸಿ ಈ ಕುರಿತು ಮಾಹಿತಿ ನೀಡಿದೆ. ಚೀನಾ ಫುಟ್ಬಾಲ್ ಅಸೋಸಿಯೇಶನ್ ವು ಲೀ ಹಾಗೂ ಕ್ಲಬ್‌ನೊಂದಿಗೆ ನಿಕಟ ಸಂಪರ್ಕದಲ್ಲಿದೆ. ನಾವು ಎಲ್ಲ ಅಗತ್ಯವಿರುವ ನೆರವನ್ನು ನೀಡಲಿದ್ದೇವೆ. ವು ಲೀ ಆದಷ್ಟು ಬೇಗನೆ ಚೇತರಿಸಿಕೊಳ್ಳಲಿ’’ ಎಂದು ಸಿಎಫ್‌ಎ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಚೀನಾದ ಶ್ರೇಷ್ಠ ಆಟಗಾರನಾಗಿರುವ 28ರ ಹರೆಯದ ಸ್ಟ್ರೈಕರ್ ಲೀ ಬಾರ್ಸಿಲೋನದಲ್ಲಿನ ಮನೆಯಲ್ಲಿ ಸ್ವಯಂ ಪ್ರತ್ಯೇಕವಾಗಿದ್ದಾರೆ. ಯುರೋಪ್‌ನ ಪ್ರಮುಖ ಐದು ಲೀಗ್‌ಗಳಲ್ಲಿ ವು ಚೀನಾದ ಏಕೈಕ ಆಟಗಾರನಾಗಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಶಾಂಘೈನಿಂದ ಎಸ್ಪಾನಿಯೊಲ್ ಕ್ಲಬ್‌ಗೆ ವರ್ಗಾವಣೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News