ಸ್ಕಾಟ್ಲೆಂಡ್‌ ಮಾಜಿ ಕ್ರಿಕೆಟಿಗ ಮಜಿದ್ ಹಕ್‌ಗೆ ಕೊರೋನ ವೈರಸ್ ಪತ್ತೆ

Update: 2020-03-22 04:29 GMT

ಲಂಡನ್, ಮಾ.21: ಪಾಕಿಸ್ತಾನದ ಸಂಜಾತ ಸ್ಕಾಟ್ಲೆಂಡ್‌ನ ಮಾಜಿ ಕ್ರಿಕೆಟಿಗ ಮಜಿದ್ ಹಕ್‌ಗೆನೋವೆಲ್ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

2006 ಹಾಗೂ 2015ರ ಮಧ್ಯೆ ಸ್ಕಾಟ್ಲೆಂಡ್ ಪರ 54 ಏಕದಿನ ಹಾಗೂ 24 ಟ್ವೆಂಟಿ-20 ಪಂದ್ಯಗಳಲ್ಲಿ ಆಡಿರುವ ಆಫ್ ಸ್ಪಿನ್ನರ್ ಹಕ್ ಗ್ಲಾಸ್ಗೊದ ಪೈಸ್ಲೆ ಪ್ರದೇಶದ ರಾಯಲ್ ಅಲೆಕ್ಸಾಂಡರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘‘ಕೊರೋನ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಆದ ಬಳಿಕ ಆರ್‌ಎಎಚ್ ಆಸ್ಪತ್ರೆಯ ಸಿಬ್ಬಂದಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ನನಗೆ ಬೆಂಬಲಿಸಿ ಸಂದೇಶ ಕಳುಹಿಸಿರುವ ಪ್ರತಿಯೊಬ್ಬರಿಗೂ ನಾನು ಕೃತಜ್ಞತೆ ಸಲ್ಲಿಸುವೆ. ಆದಷ್ಟು ಬೇಗನೆ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದ್ದೇನೆ’’ ಎಂದು ಮಜಿದ್ ಹಕ್ ಟ್ವೀಟ್ ಮಾಡಿದ್ದಾರೆ.

37ರ ಹರೆಯದ ಹಕ್ ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್‌ನಲ್ಲಿ 2015ರಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಸ್ಕಾಟ್ಲೆಂಡ್ ಪರ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News