ಎನ್.ಪಿ.ಆರ್, ಜನಗಣತಿಗೆ ಮೀಸಲಿಟ್ಟ ಹಣವನ್ನು ಕೊರೋನ ವಿಪತ್ತು ಪರಿಹಾರಕ್ಕೆ ಬಳಸಿ: ಎ ಸಿ ವಿನಯರಾಜ್

Update: 2020-03-24 12:00 GMT

ಮಂಗಳೂರು : ಎನ್.ಪಿ.ಆರ್, ಜನಗಣತಿ ಕೈ ಬಿಟ್ಟು ಅದಕ್ಕೆ ಮೀಸಲಿಟ್ಟ ಹಣವನ್ನು ಕೊರೋನದಿಂದ ಆದ ತೊಂದರೆಗೆ ಆರ್ಥಿಕ ಸಹಾಯ ಮಾಡಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಧ್ಯಮ ವಕ್ತಾರ, ವಕೀಲರಾದ ಎಸಿ ವಿನಯರಾಜ್ ಅವರು ತಿಳಿಸಿದ್ದಾರೆ.

ಕೇಂದ್ರ ಸರಕಾರ ಎ. 1ರಿಂದ ದೇಶದಾದ್ಯಂತ ಎನ್ ಪಿ ರ್ ಮತ್ತು ಜನಗಣತಿ ಮಾಡುವ ಬಗ್ಗೆ ಈಗಾಗಲೇ ಆದೇಶವನ್ನು ಹೊರಡಿಸಿದೆ ಮತ್ತು ಅದಕ್ಕೆ ಸಾವಿರಾರು ಕೋಟಿ ರೂ. ಖರ್ಚು ಮಾಡಲು ಹೊರಟಿದೆ. ಕೊರೋನಾ ಭೀತಿಯಿಂದ ದೇಶವೇ ತತ್ತರಿಸಿ ಹೋಗಿದ್ದು, ಸರಕಾರದ ಆದೇಶದಂತೆ ಜನಸಾಮಾನ್ಯರು ಮನೆಯ ಒಳಗೆ ಸಮಯವನ್ನು ಕಳೆಯುತ್ತಿದ್ದಾರೆ. ಯಾವುದೇ ಆದಾಯವಿಲ್ಲದೆ ಪರದಾಡುತ್ತಿದಾರೆ. ಎಲ್ಲಾ ವರ್ಗದ ಜನ ಇಂದು ಆರ್ಥಿಕ ತೊಂದರೆಗೆ ಒಳಗಾಗಿದ್ದಾರೆ. ದಿನಸಿ ವಸ್ತಗಳ ಬೆಲೆ ಗಗನಕ್ಕೆ ಏರಿದೆ. ಸರಕಾರ ಬೆಲೆ ನಿಯಂತ್ರಣದ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ. ಕೈ ತೊಳೆಯುವ ಸಾಬೂನು, ಮಾಸ್ಕ್ ಮತ್ತು ಸ್ಯಾನಿಟೈಸರ್ ಬೆಲೆ 500 ಪಟ್ಟು ಹೆಚ್ಚಳ ಹಾಗಿದೆ. ದೇಶ ತುರ್ತು ಪರಿಸ್ಥಿತಿಯಲ್ಲಿ ಸಾಗುತ್ತಿರುವಾಗ ವ್ಯಾಪಾರಸ್ಥರಿಂದ ದರೋಡೆ ನಡೆಯುತ್ತಿದೆ. ಇಂತಹ ಸಂದರ್ಭ ಎನ್ ಪಿ ರ್, ಜನಗಣತಿ ಕೈ ಬಿಟ್ಟು ಅದಕ್ಕೆ ಮೀಸಲಿರಿದ ಹಣವನ್ನು ಕೊರೋನದಿಂದ ಆದ ತೊಂದರೆಗೆ ಆರ್ಥಿಕ ಸಹಾಯ ಮಾಡಬೇಕೆಂದು ಅವರು ಒತ್ತಾಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಂಚಾಯತ್/ಮುನ್ಸಿಪಾಲಿಟಿ/ನಗರಸಭೆ/ಪುರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ  ಟ್ರೇಡ್ ಲೈಸೆನ್ಸ್ ನವೀಕರಣ ಶುಲ್ಕ/ನೀರಿನ ಬಿಲ್ಲು/ಸ್ವಂಘೋಷಿತ ಆಸ್ತಿ ತೆರಿಗೆ ಮುಂತಾದ ಸೇವೆಗಳಿಗೆ ಯಾವುದೇ ಫೈನ್ ಹಾಕಬಾರದು ಹಾಗು ಪಾವತಿ ಮಾಡಲು ಸಮಯಾವಕಾಶ ಕೊಡಬೇಕು. ಸಾಲ ಮರುಪಾವತಿ ಮಾಡಲು ಬ್ಯಾಂಕ್ ಗಳು ಸಾಲಗಾರರನ್ನು ಪೀಡಿಸುತ್ತಿದ್ದಾರೆ. ಸರಕಾರ ಕೂಡಲೇ ಈ ರೀತಿಯ ಹಿಂಸೆಯ ಬಗ್ಗೆ ಆದೇಶ ಹೊರಡಿಸಬೇಕಾಗಿದೆ ಎಂದು ಹೇಳಿದರು.

ಅರೋಗ್ಯ ಸೇವೆ ನೀಡುವ ಸಿಬ್ಬಂದಿಗಳಿಗೆ, ಮನೆ ಬಾಗಿಲಿಗೆ ಹೋಗಿ ಕಸ ಸಂಗಹಿಸುವ ಕಸ ವಿಲೇವಾರಿ ಸಿಬ್ಬಂದಿಗಳಿಗೆ ಹಾಗು ಮ ನ ಪಾ ಸಿಬ್ಬಂದಿಗಳಿಗೆ ಅವರನ್ನು ಕೊರೋನದಿಂದ ರಕ್ಷಿಸಿಕೊಳ್ಳಲು ಸರಕಾರ ಅಗತ್ಯ ಪರಿಕರಗಳನ್ನು ಪೂರೈಸಬೇಕಾಗಿದೆ. ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸಬೇಕಾಗಿದೆ. ನೋಟುಗಳನ್ನು ಯು ವಿ  ಕಿರಣಗಳಿಂದ ಶುಚಿಗೊಳಿಸಬೇಕಾಗಿದೆ. ಇತರ ಎಲ್ಲಾ ಸ್ಥಳಗಳನ್ನು ಯು ವಿ ಕಿರಣ ಅಥವಾ ವೈರಸ್ ನಿರ್ಮೂಲನೆ ಮಾಡುವ ಇತರ ವಿಧಾನಗಳನ್ನು ಉಪಯೋಗಿಸಬೇಕಾಗಿದೆ. ಸರಕಾರಗಳು ಪ್ರಸ್ತುತ ಇದಕ್ಕೆ ಹಣ ನಿಯೋಗ ಮಾಡಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News