ಆನ್‍ಲೈನ್ ಡೆಲಿವರಿ ಸೇವೆಗಳಿಗೆ ಅನುಮತಿ: ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್

Update: 2020-03-26 14:49 GMT

ಬೆಂಗಳೂರು, ಮಾ.26: ಲಾಕ್‍ ಡೌನ್ ಹಿನ್ನೆಲೆಯಲ್ಲಿ ಆನ್‍ಲೈನ್ ಡೆಲಿವರಿ ಸರ್ವೀಸ್‍ಗಳಿಗೆ ಕಾರ್ಯ ನಿರ್ವಹಿಸಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅನುಮತಿ ನೀಡಿದ್ದಾರೆ.

ಫ್ಲಿಪ್‍ಕಾರ್ಟ್, ಅಮೆಜಾನ್, ಸ್ವಿಗ್ಗಿ ಒಳಗೊಂಡಂತೆ ಎಲ್ಲಾ ಆನ್‍ಲೈನ್ ಸರ್ವೀಸ್‍ಗಳಿಗೆ ಅನುಮತಿ ನೀಡಲಾಗಿದೆ. ಕಾರ್ಯ ನಿರ್ವಹಿಸಲು ಪಾಸ್ ಕಡ್ಡಾಯವಾಗಿದ್ದು, ಪಾಸ್ ಇಲ್ಲದವರು ಓಡಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸ್ವಿಗ್ಗಿ, ಝೊಮ್ಯಾಟೊ, ಫ್ಲಿಪ್ ಕಾರ್ಟ್, ಬಿಗ್ ಬಜಾರ್, ಸ್ನಾಪ್ ಡೀಲ್, ಮೆಡ್ ಲೈಫ್, ಬಿಗ್ ಬ್ಯಾಸ್ಕೆಟ್, ಅಮೆಜಾನ್, ಎಮ್‍ಟಿಆರ್ ಫುಡ್, ಅಪೋಲೊ ಫಾರ್ಮಸಿ, ಒಲಾ ಈಟ್ಸ್, ಮಿಲ್ಕ್ ಬ್ಯಾಸ್ಕೆಟ್ ಹೀಗೆ 25ಕ್ಕೂ ಹೆಚ್ಚು ಕಂಪನಿಗಳು ತಮ್ಮ ಅಂತರ್ಜಾಲ ಸೇವೆಯನ್ನು ಮುಂದುವರಿಸಬಹುದಾಗಿದೆ. 

ಈ ಸಂಸ್ಥೆಗಳ ಉದ್ಯೋಗಿಗಳು ಸಂಚಾರಕ್ಕೆ ಪಾಸ್‍ಗಳನ್ನು ಪಡೆಯುವುದು ಅಗತ್ಯವಾಗಿದೆ. ನಗರದಲ್ಲಿ 8 ಉಪ ಆಯುಕ್ತರ ಕಚೇರಿಗಳಲ್ಲಿ ಪಾಸ್‍ಗಳನ್ನು ಪಡೆಯಬಹುದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News