ಮಾ.30ರಿಂದ ಪಡಿತರ ವಿತರಣೆ: ಆಹಾರ ಸಚಿವ ಕೆ.ಗೋಪಾಲಯ್ಯ

Update: 2020-03-26 17:34 GMT

ಬೆಂಗಳೂರು, ಮಾ.26: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಎರಡು ತಿಂಗಳ ಪಡಿತರವನ್ನು ಹಂತ, ಹಂತವಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

ಪಡಿತರ ವಿತರಣೆಯಲ್ಲಿ ರಾಜ್ಯದ ಜನತೆಗೆ ಯಾವುದೇ ತೊಂದರೆಯಾಗಂತೆ ಹಂಚಿಕೆ ಮಾಡುತ್ತೇವೆ. ಈ ಬಗ್ಗೆ ಯಾವುದೆ ಅನುಮಾನ ಬೇಡ. ಮುಂದಿನ ಸೋಮವಾರ(ಮಾ.30)ದಿಂದಲೇ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಒಂದು ಮನೆಯಿಂದ ಒಬ್ಬ ವ್ಯಕ್ತಿ ಬಂದು ರೇಷನ್ ಸ್ವೀಕರಿಸಬೇಕು, ಈ ಸಲ ಬೆರಳಚ್ಚು ಇರುವುದಿಲ್ಲ. ರೇಷನ್ ಕಾರ್ಡನ್ನು ತೋರಿಸಿ ಪಡಿತರವನ್ನು ಪಡೆಯಬಹುದಾಗಿದೆ. ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News