ಕೊರೋನವೈರಸ್‌ಗೆ ಈ ವರ್ಷ 18 ಲಕ್ಷ ಬಲಿ ?

Update: 2020-03-27 16:58 GMT

ಪ್ಯಾರಿಸ್, ಮಾ. 27: ಈಗಾಗಲೇ ಜಗದ ಉದ್ದಗಲವನ್ನು ವ್ಯಾಪಿಸಿರುವ ಮಾರಕ ಸಾಂಕ್ರಾಮಿಕ ಕಾಯಿಲೆ ಕೋವಿಡ್-19ನ್ನು ನಿಯಂತ್ರಿಸಲು ತೆಗೆದುಕೊಳ್ಳಲಾಗಿರುವ ಕಠಿಣ ಮತ್ತು ಕ್ಷಿಪ್ರ ಕ್ರಮಗಳ ಹೊರತಾಗಿಯೂ, ಈ ಕಾಯಿಲೆಯು ಈ ವರ್ಷ 18 ಲಕ್ಷ ಮಂದಿಯ ಬಲಿ ಪಡೆಯಬಹುದು ಎಂದು ಗುರುವಾರ ಪ್ರಕಟಗೊಂಡ ಬ್ರಿಟನ್‌ನ ಇಂಪೀರಿಯಲ್ ಕಾಲೇಜ್‌ನ ಅಧ್ಯಯನವೊಂದು ಹೇಳಿಕೊಂಡಿದೆ.

ತಪಾಸಣೆ, ರೋಗಿಗಳನ್ನು ಪ್ರತ್ಯೇಕವಾಗಿ ಇರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಸೇರಿದಂತೆ ಸರಕಾರ ತೆಗೆದುಕೊಳ್ಳುವ ಕಠಿಣ ಸಾರ್ವಜನಿಕ ಆರೋಗ್ಯ ಕ್ರಮಗಳ ಮೂಲಕ ಕೋಟ್ಯಂತರ ಜನರನ್ನು ರಕ್ಷಿಸಬಹುದು ಎಂದು ಸಂಶೋಧಕರು ಹೇಳುತ್ತಾರೆ.

ಕೊರೋನವೈರಸ್‌ಗೆ ಯಾವುದೇ ತಡೆ ಹಾಕದೆ ಅನಿರ್ಬಂಧಿತವಾಗಿ ಮುಂದುವರಿಯಲು ಬಿಟ್ಟರೆ, ಈ ವರ್ಷ ಭೂಮಿಯಲ್ಲಿರುವ ಎಲ್ಲರೂ ಸೋಂಕಿಗೆ ಒಳಗಾಗುತ್ತಾರೆ ಹಾಗೂ 4 ಕೋಟಿ ಜನರು ಸಾಯುತ್ತಾರೆ ಎಂದು ಅಧ್ಯಯನ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News