ಕೊರೋನ ವೈರಸ್ ಯಾವ ವಸ್ತುಗಳ ಮೇಲೆ ಎಷ್ಟು ಸಮಯ ಜೀವಂತವಿರುತ್ತದೆ ?

Update: 2020-03-28 09:10 GMT

ಕೊರೋನ ವೈರಸ್ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿ ಸಾವಿರಾರು ಜನರ  ಸಾವಿಗೆ ಕಾರಣವಾಗಿದೆಯಲ್ಲದೆ ಲಕ್ಷಾಂತರ ಜನರು ಸೋಂಕಿನಿಂದ ನರಳುವಂತಾಗಿದೆ. ಗಾಳಿಯಲ್ಲಿ ತೇಲಾಡುವ ಅಥವಾ ವಿವಿಧ ವಸ್ತುಗಳ ಮೇಲ್ಮೈ ಪದರದಲ್ಲಿರುವ ಸೋಂಕು ತುಂಬಿದ ನೀರಿನ ಹನಿಗಳು ಇಂದು ಜಗತ್ತಿನಾದ್ಯಂತ ಸೋಂಕು ಹರಡಿ ಬಿಟ್ಟಿದೆ.

ಅಷ್ಟಕ್ಕೂ ಕೊರೋನ ವೈರಸ್ ವಾತಾವರಣದಲ್ಲಿ ಹಾಗೂ ವಿವಿಧ ವಸ್ತುಗಳ ಮೇಲೆ ಅಷ್ಟು ಸಮಯ ಜೀವಂತವಿರುತ್ತದೆ ಎಂಬುದೇ ಹಲವರು ಕೇಳುವ ಪ್ರಶ್ನೆಯಾಗಿದೆ. ಸೋಂಕುಪೀಡಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಈ ಕೋವಿಡ್-19 ಇತರರಿಗೆ ಹರಡುತ್ತಿದೆ.

ವಿವಿಧ ವಸ್ತುಗಳ ಮೇಲ್ಮೈ ಪದರದಲ್ಲಿ ಈ ಕೊರೋನ ವೈರಸ್ ಎಷ್ಟು ಕಾಲ ಜೀವಂತವಿರಬಹುದೆಂಬ ಮಾಹಿತಿಯನ್ನು 'ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‍'ನಲ್ಲಿ ನೀಡಲಾಗಿದೆ. ವಿವಿಧ ವಸ್ತುಗಳ ಮೇಲೆ ಈ ವೈರಸ್ ಇದ್ದರೂ ಅದು ದಿನಗಳೆದಂತೆ ಸೋಂಕು ಹರಡುವ ಸಾಮರ್ಥ್ಯ ಕಳೆದುಕೊಂಡು ನಂತರ ಸಾಯುತ್ತದೆ. ಆದರೆ  ಅದು ಎಷ್ಟು ವೇಗವಾಗಿ ಸಾಯುತ್ತದೆ ಎಂಬುದು ಯಾವ ವಸ್ತುವಿನ ಮೇಲೆ ಅದು ನೆಲೆ ನಿಂತಿದೆ ಎಂಬುದರ ಮೇಲೆ ಅವಲಂಬಿತವಾಗಿದೆ.

ಸ್ಟೀಲ್ ವಸ್ತುಗಳ ಮೇಲೆ ಕೊರೋನ ವೈರಸ್  72 ಗಂಟೆಗಳ ಕಾಲ ಅಂದರೆ ಎರಡರಿಂದ ಮೂರು ದಿನಗಳ ಕಾಲ ಜೀವಂತವಿರುತ್ತದೆ.

ಪ್ಲಾಸ್ಟಿಕ್ ವಸ್ತುಗಳ ಮೇಲೆ ಕೂಡ ಕೊರೋನ ವೈರಸ್ ಎರಡು ಮೂರು ದಿನ ಅಥವಾ 72 ಗಂಟೆಗಳ ಕಾಲ ಜೀವಂತವಿರುತ್ತದೆ.

ರಟ್ಟುಗಳಲ್ಲಿ ಈ ವೈರಸ್ 24 ಗಂಟೆಗಳ ಕಾಲ ಜೀವಂತವಿರುತ್ತದೆಯಾದರೆ, ತಾಮ್ರದ ವಸ್ತುಗಳಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಈ ವೈರಸ್ ಜೀವಂತವಿರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಕೃಪೆ: usatoday.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News