ಬೆಂಗಳೂರು: ನಗರದಲ್ಲಿ ಜ್ವರ ತಪಾಸಣೆಗೆ ವ್ಯವಸ್ಥೆ

Update: 2020-03-29 17:05 GMT

ಬೆಂಗಳೂರು, ಮಾ.29: ನಗರದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜ್ವರ ತಪಾಸಣೆಗೆ ಬಿಬಿಎಂಪಿ ಕ್ರಮ ಕೈಗೊಂಡಿದೆ. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನ ಜ್ವರ ತಪಾಸಣೆಗೆ ಒಳಪಡಿಸಲು ಸೂಚನೆ ನೀಡಲಾಗಿದೆ.

ಕೋವಿಡ್ ಲಕ್ಷಣ ಇರುವವರಲ್ಲಿ ಪ್ರಮುಖವಾಗಿ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಅತಿಸಾರ ಬೇಧಿ ಕಾಣಿಸಿಕೊಳ್ಳುತ್ತೆ. ಇದರಲ್ಲಿ ಹೆಚ್ಚಾಗಿ ಜ್ವರ ಪ್ರಕರಣಗಳು ದಾಖಲಾಗ್ತಿವೆ. ಮುಂಜಾಗ್ರತಾ ಕ್ರಮವಾಗಿ ಜ್ವರ ಪತ್ತೆ ಮಾಡುವ ಅವಶ್ಯಕತೆರೋದ್ರಿಂದ ಆರೋಗ್ಯ ಕೇಂದ್ರಗಳಿಗೆ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ವಾರದ ಎಲ್ಲಾ ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೂ ಜ್ವರ ತಪಾಸಣೆ ನಡೆಸಬೇಕು. ಆರೋಗ್ಯ ಸಂಸ್ಥೆ ಹೊರಾಂಗಣದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಜ್ವರ ತಪಾಸಣೆ. ಜ್ವರ ತಪಾಸಣೆ ನಡೆಸೋಕೆ ಅಗತ್ಯ ಆರೋಗ್ಯ ಸಲಕರಣೆಗಳು ಲಭ್ಯವಿರಬೇಕು. ಒಳ ಬರುವ ರೋಗಿಗಳು ಹಾಗೂ ಆರೋಗ್ಯ ಸಿಬ್ಬಂದಿ ಮಧ್ಯೆ ಕನಿಷ್ಠ 1 ಮೀಟರ್ ಅಂತರ ಇರಬೇಕು. ತಪಾಸಣೆ ವೇಳೆ ಕೊರೋನ ಲಕ್ಷಣ ಕಂಡುಬಂದಲ್ಲಿ ಮೇಲ್ದರ್ಜೆಯ ಆಸ್ಪತ್ರೆಗೆ ಮಾಹಿತಿ ನೀಡಬೇಕು.

ಜ್ವರ ತಪಾಸಣೆಯ ವರದಿಗಳನ್ನ ತಾಲೂಕು ಆರೋಗ್ಯಾಧಿಕಾರಿ, ವಲಯ ಆರೋಗ್ಯಾಧಿಕಾರಿ ಮುಖಾಂತರ ಯೋಜನಾ ನಿರ್ವಹಣಾಧಿಕಾರಿಗಳಿಗೆ ಸಂಜೆ 5ಗಂಟೆಯ ಒಳಗೆ ಮಾಹಿತಿ ನೀಡಬೇಕು.

ಆಸ್ಪತ್ರೆಗಳ ವಿವರ: ಪಶ್ಚಿಮ ವಲಯ: ಗೋರಿಪಾಳ್ಯ ನಗರ ಸಮುದಾಯ ಆರೋಗ್ಯ ಕೇಂದ್ರ, ವಾರ್ಡ್ ನಂಬರ್ 137, 2ನೇ ಕ್ರಾಸ್ ಸಂಗಮ್ ಸರ್ಕಲ್, ಗೋರಿ ಪಾಳ್ಯ, ಫೋನ್ ನಂಬರ್-9480683908.

ಕೋಂದಡರಾಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ವಾರ್ಡ್ ನಂಬರ್ 94, ಶಿರುರು ಪಾರ್ಕ್ ರೋಡ್, ಶೇಷಾದ್ರಿಪುರಂ, ಇಎಸ್‍ಐ ಆಸ್ಪತ್ರೆ ಸಮೀಪ, ನಟರಾಜ ಥಿಯೇಟರ್ ಸಮೀಪ, ಕೋದಂಡರಾಪುರ, ಫೋನ್ ನಂ: 9886210326.

ಮಹಾಲಕ್ಷ್ಮಿ ಲೇಔಟ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ವಾರ್ಡ್ ನಂ.68, ಎಜಿಬಿ ಲೇಔಟ್, 2ಟಿಜ ಮೈನ್, ಚೇರಮನ್ ಚಿನ್ನಪ್ಪ ಮೆಮೋರಿಯಲ್ ಆಸ್ಪತ್ರೆ ಸಮೀಪ, ಮಹಾಲಕ್ಷ್ಮಿ ಲೇಔಟ್, ಫೋನ್ ನಂ: 8029558483.

ಮೂಡಲಪಾಳ್ಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ವಾರ್ಡ್ ನಂಬರ್ 126, ಜಿಕೆಡಬ್ಲ್ಯು ಲೇಔಟ್ ಬಸ್ ಸ್ಟಾಪ್ ಸಮೀಪ, ಸರಸ್ವತಿ ನಗರ, ಮೂಡಲಪಾಳ್ಯ, ಫೋನ್ ನಂ: 9480685533.

ನಾಗಪ್ಪ ಬ್ಲಾಕ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ವಾರ್ಡ್ ನಂಬರ್ 73, 3ನೇ ಮೈನ್, ಶ್ರೀರಾಂಪುರ ಪೆÇೀಸ್ಟ್ ಆಫೀಸ್ ಸಮೀಪ, ಸೇವಾ ಕೇಂದ್ರ ಬಿಲ್ಡಿಂಗ್, ನಾಗಪ್ಪ ಬ್ಲಾಕ್ ಹೆಲ್ತ್ ಸೆಂಟರ್ ಮುಖ್ಯ ರಸ್ತೆ,ಫೋನ್ ನಂ: 9980767810.

ನೇತಾಜಿ ಸರ್ಕಲ್ ಮತ್ತಿಕೆರೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ವಾರ್ಡ್ ನಂಬರ್ 36, ಬಿಬಿಎಂಪಿ ಕಟ್ಟಡ, ನೇತಾಜಿ ಸರ್ಕಲ್, ನೇತಾಜಿ ರಸ್ತೆ ಮತ್ತಿಕೆರೆ, ಫೋನ್ ನಂ:9886620365.

ಶ್ರೀರಾಂಪುರ ರೆಫೆರಲ್ ಹಾಸ್ಪಿಟಲ್, ವಾರ್ಡ್ ನಂ.97, ಶ್ರೀರಾಂಪುರ 9ನೇ ಮೈನ್, ಶ್ರೀರಾಂಪುರ ಪೆÇಲೀಸ್ ಸ್ಟೇಷನ್ ಸಮೀಪ, ಫೋನ್ ನಂ: 9480683788.

ದಕ್ಷಿಣ ವಲಯ: ಜೆಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ವಾರ್ಡ್ ನಂ 178, 12ನೇ ಕ್ರಾಸ್, 35ನೇ ಮೈನ್, ಬೆಂಗಳೂರು 1 ಮುಂಭಾಗ, ಜೆಪಿ ನಗರ ಮೊದಲನೇ ಹಂತ, ಫೋನ್ ನಂ: 9008193333.

ಎಚ್ ಸಿದ್ದಯ್ಯ ರಸ್ತೆ ನಗರ ಸಮುದಾಯ ಆರೋಗ್ಯ ಕೇಂದ್ರ, ವಾರ್ಡ್ ನಂ 118, 2ನೇ ಕ್ರಾಸ್, ಡಿ ಮಾವಳ್ಳಿ, ಬಿಬಿಎಂಪಿ ಕಾರ್ ಪಾರ್ಕಿಂಗ್ ಹಿಂಭಾಗ, ಜೆಸಿ ರಸ್ತೆ, ಫೋನ್ ನಂ: 9880435573.

ವಿದ್ಯಾಪೀಠ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ವಾರ್ಡ್ ನಂ. 164, 12ನೇ ಕ್ರಾಸ್, ಹನುಮಂತನಗರ ಪೆÇಲೀಸ್ ಸ್ಟೇಷನ್ ಹಿಂಭಾಗ, ಶಂಕರ್ ನಾಗ್ ಸರ್ಕಲ್ ಸಮೀಪ, ಅಶೋಕ್ ನಗರ, ಫೋನ್ ನಂ: 9964499007.

ವೆಸ್ಟ್ ಆಫ್ ಕೋರ್ಡ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ವಾರ್ಡ್ ನಂ 124, 9ನೇ ಕ್ರಾಸ್, 9ಣh ಮೈನ್, ಶಿವಗಣೇಶ್ ದೇವಸ್ಥಾನದ ಮುಂಭಾಗ, ವೆಸ್ಟ್ ಆಫ್ ಕಾರ್ಡ್ ರೋಡ್, ಫೋನ್ ನಂ: 9986030169.

ಆಡುಗೋಡಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ವಾರ್ಡ್ ನಂಬರ್ 147, ಭುವನೇಶ್ವರಿ ರಸ್ತೆ ಬಜಾರ್ ಸ್ಟ್ರೀಟ್, ಹೊಸೂರು ಮೈನ್ ರೋಡ್, ಆಡುಗೋಡಿ ಸಿಗ್ನಲ್ ಸಮೀಪ, ಫೋನ್ ನಂ: 9902156278.

ಬನಶಂಕರಿ ನಗರ ಸಮುದಾಯ ಆರೋಗ್ಯ ಕೇಂದ್ರ, ವಾರ್ಡ್ ನಂಬರ್ 165, 17ನೇ ಮೈನ್, ಬಿಎನ್‍ಎಮ್ ಕಾಲೇಜು ಸಮೀಪ, ಬಿಎಸ್‍ಕೆ 2ನೇ ಸ್ಟೇಜ್, ಫೋನ್ ನಂ: 9480684154.

ಪೂರ್ವ ವಲಯ: ಕೆಜಿ ಹಳ್ಳಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ವಾರ್ಡ್ ನಂ 23, ನಂಬರ್ 4, ಐಪಿಪಿ ಬಿಲ್ಡಿಂಗ್, ಎಎಂಸಿ ರೋಡ್, ಕೆಜಿ ರಸ್ತೆ, ಫೋನ್ ನಂ: 9741010458. ಎಂಆರ್ ಪಾಳ್ಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ವಾರ್ಡ್ ನಂ 62, ಗಣೇಶ ದೇವಸ್ಥಾನ ಹಿಂಭಾಗ, ಎಂ.ಆರ್ ಪಾಳ್ಯ ನಗರ ಫೋನ್ ನಂ: 9480683577.

ಸುಲ್ತಾಪಾಳ್ಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ವಾರ್ಡ್ ನಂ 32, ಪುಷ್ಪಾಂಜಲಿ ಥಿಯೇಟರ್ ಸಮೀಪ, ಲಾಲ್‍ಬಹದ್ದೂರ್ ಶಾಸ್ತ್ರಿ ಕಾಲೇಜು ಮುಂಭಾಗ ಆರ್.ಟಿ ನಗರ, ಫೋನ್ ನಂ: 9480684144.

ಹಲಸೂರು ನಗರ ಸಮುದಾಯ ಆರೋಗ್ಯ ಕೇಂದ್ರ, ವಾರ್ಡ್ ನಂ 89, ಹಲಸೂರು ರೆಫೆರಲ್ ಹಾಸ್ಟಿಟಲ್, ಕೇಂಬ್ರಿಡ್ಜ್ ರಸ್ತೆ, ಹಲಸೂರು ಪೊಲೀಸ್ ಠಾಣೆ ಸಮೀಪ, ಫೋನ್ ನಂ: 9901507325.

ಪಶ್ಚಿಮ ವಲಯ: ಯಶವಂತಪುರ ಟ್ರಾನ್ಸಿಟ್ ಕ್ಲಿನಿಕ್ ಯಶವಂತಪುರ, ಬಿಎಂಟಿಸಿ ಬಸ್ ಸ್ಟಾಪ್, ಫೋನ್ ನಂ: 8123289656 ಮೆಜೆಸ್ಟಿಕ್ ಟ್ರಾನ್ಸಿಟ್ ಕ್ಲಿನಿಕ್ ಮೆಜೆಸ್ಟಿಕ್, ಬಿಎಂಟಿಸಿ ಬಸ್ ಸ್ಟಾಪ್ ಫೋನ್ ನಂ: 9663946534.

ಪೂರ್ವ ವಲಯ:  ಟಸ್ಕರ್ ಟೌನ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬ್ರಾಡ್ ವೇ ಡಿಸ್ಪೆನ್ಸರಿ, ಶಿವಾಜಿನಗರ, ಫೆÇೀನ್ ನಂ: 7899971965, ಕೋಡಿಹಳ್ಳಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ವಾರ್ಡ್ ನಂ 88, 1sಣ ಕ್ರಾಸ್, ವಾರ್ಡ್ ಆಫೀಸ್ ಹಿಂಭಾಗ, ಓಲ್ಡ್ ಏರ್ ಫೋರ್ಟ್ ರಸ್ತೆ, ಕೋಡಿಹಳ್ಳಿ, ಫೋನ್ ನಂ: 9731830194.

ಆರ್‍ಆರ್ ನಗರ, ಹೇರೋಹಳ್ಳಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಫೋನ್ ನಂ: 9900156336. ಲಗ್ಗೆರೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಫೋನ್ ನಂ: 9901251643. ಯಲಹಂಕ - ಜಿ.ಎಚ್ ಯಲಹಂಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಫೋನ್ ನಂ: 9448694945. ಕೊಡಿಗೆಹಳ್ಳಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಫೋನ್ ನಂ: 9448792436. ದಾಸರಹಳ್ಳಿ - ಮಲ್ಲಸಂದ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಫೋನ್ ನಂ: 9449683898. ಮಹದೇವಪುರ - ಮಾರತ್‍ಹಳ್ಳಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಫೋನ್ ನಂ: 8660569642. ಜಿ.ಹೆಚ್.ಕೆಆರ್ ಪುರಂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಫೆÇೀನ್ ನಂ: 9448332195. ಬೊಮ್ಮನಹಳ್ಳಿ - ಬೇಗೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಫೋನ್ ನಂ: 984413088. ಕೋಣನಕುಂಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೋಣನಕುಂಟೆ ಪೊಲೀಸ್ ಠಾಣೆ ಸಮೀಪ,ಫೋನ್ ನಂ: 9448343155. ಬೊಮ್ಮನಹಳ್ಳಿ - ಆನೇಕಲ್ ಜಿ.ಹೆಚ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಫೋನ್ ನಂ: 9606507262.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News