ಮನೆ ಖಾಲಿ ಮಾಡಿಸಲು ಸುಳ್ಳು ಸುದ್ದಿ: ಬಿಬಿಎಂಪಿ ಸದಸ್ಯೆಯ ಪತಿ ವಿರುದ್ಧ ಎಫ್‍ಐಆರ್ ದಾಖಲು

Update: 2020-03-31 15:38 GMT

ಬೆಂಗಳೂರು, ಮಾ.31: ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನಿಗೆ ಕೊರೋನ ಸೋಂಕಿದೆ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಆರೋಪದಡಿ ಬಿಬಿಎಂಪಿಯ ಚೌಡೇಶ್ವರಿ ವಾರ್ಡ್-2ರ ಕಾರ್ಪೊರೇಟರ್ ಅವರ ಪತಿ ಅಮರನಾಥ್ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.

ವ್ಯಕ್ತಿಯೊಬ್ಬರ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಈತನಿಗೆ ಕೊರೋನ ಸೋಂಕು ತಗುಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು ಎನ್ನಲಾಗಿದೆ.

ಈ ವದಂತಿಯಿಂದಾಗಿ ಆಂಧ್ರ-ತೆಲಂಗಾಣದ ಕೂಲಿ ಕಾರ್ಮಿಕರು ಭಯಭೀತರಾಗಿ ಗಾಬರಿಯಿಂದ ಮನೆಬಿಟ್ಟು ಊರಿಗೆ ಹೋಗಲು ತಂಡೋಪತಂಡವಾಗಿ ಯಲಹಂಕದ ಕೋಗಿಲು ಕ್ರಾಸ್ ಬಸ್ ನಿಲ್ದಾಣಕ್ಕೆ ಬಂದಿರುವುದನ್ನು ಕಂಡ ಪೊಲೀಸರು ಜನತೆಗೆ ವಿಚಾರಿಸಿದಾಗ ಅಮರ್ ನಾಥನ ಸುಳ್ಳು ವದಂತಿ ಬಯಲಿಗೆ ಬಂದಿದೆ.

ಈ ಸಂಬಂಧ ಕೊರೋನ ಸೋಂಕಿನ ಬಗ್ಗೆ ಸುಳ್ಳು ವದಂತಿ ಹರಡಿಸಿರುವ ಅಮರ್ ನಾಥ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ  ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News