ಕೊರೋನ ಸೋಂಕು ಶಂಕಿತರನ್ನು ರವಾನಿಸಲು 500 ಓಲಾ ಕಾರುಗಳು

Update: 2020-03-31 16:22 GMT

ಬೆಂಗಳೂರು, ಮಾ.31: ಸರಕಾರ ಕೊರೋನ ಸೋಂಕಿತರ ಚಿಕಿತ್ಸೆಯ ಸಂಚಾರಕ್ಕೆ ಸಹಾಯವಾಗಲು ಓಲಾ ಸಂಸ್ಥೆಯ 500 ಕ್ಯಾಬ್‍ಗಳನ್ನು ಬಳಸಿಕೊಳ್ಳಬಹುದು ಎಂದು ಸಂಸ್ಥೆಯ ಸಂಸ್ಥಾಪಕ ಭವಿಶ್ ಅಗರ್‍ವಾಲ್ ರವಿವಾರ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. 

ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಓಲಾ ಕ್ಯಾಬ್‍ಗಳು ಸೇವೆ ಒದಗಿಸುತ್ತಿವೆ. ಯಾವ ಜಿಲ್ಲೆಗಳಲ್ಲಿ ಎಷ್ಟು ಕ್ಯಾಬ್‍ಗಳು ಅವಶ್ಯವಿದೆ ಎಂದು ಸರಕಾರ ತೀರ್ಮಾನಿಸಲಿದೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿಗಳು ಆಯಾ ಜಿಲ್ಲೆಗಳ ಅಧಿಕಾರಿಗಳ ಜೊತೆ ಓಲಾ ಕ್ಯಾಬ್‍ಗಳನ್ನು ಬಳಸಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಕೊರೋನ ಸಂಬಂಧಿತ ಅಗತ್ಯ ಸೇವೆಗಳಿಗೆ ಓಲಾ ಕ್ಯಾಬ್‍ಗಳನ್ನು ಬಳಸಿಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News