2022ರ ತನಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮುಂದೂಡಿಕೆ

Update: 2020-04-01 04:35 GMT

ಪ್ಯಾರಿಸ್, ಮಾ.31: ಟೋಕಿಯೊ ಒಲಿಂಪಿಕ್ಸ್ ಮರು ಆಯೋಜನೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 2021ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ್ನು 2022ಕ್ಕೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನ ವೈರಸ್ ಸಾಂಕ್ರಾಮಿಕ ರೋಗ ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂದೂಲ್ಪಟ್ಟಿದ್ದ 2020ರ ಟೋಕಿಯೊ ಗೇಮ್ಸ್ 2021ರ ಜುಲೈ 23ರಿಂದ ಆಗಸ್ಟ್ 8ರ ತನಕ ನಡೆಯಲಿದೆ ಎಂದು ಒಲಿಂಪಿಕ್ಸ್ ಆಯೋಜಕರು ಘೋಷಿಸಿದ ಬೆನ್ನಲ್ಲೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮುಂದೂಡಿಕೆಯಾಗಿರುವ ವಿಚಾರವನ್ನು ತಿಳಿಸಿದೆ.

 2021ರ ಆಗಸ್ಟ್ 6ರಿಂದ 15ರ ತನಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಒರೆಗಾನ್‌ನ ಯುಜಿನ್‌ನಲ್ಲಿ ನಿಗದಿಯಾಗಿತ್ತು. ಟೋಕಿಯೊ ಒಲಿಂಪಿಕ್ಸ್ 2021ರ ಜುಲೈ 23ರಿಂದ ಆಗಸ್ಟ್ 8ರ ತನಕ ನಿಗದಿಪಡಿಸಲಾಗಿತ್ತು. ಜಪಾನ್‌ನ ಆಯೋಜಕರು ಹಾಗೂ ಐಒಸಿ ಇಂದು ಪ್ರಕಟಿಸಿರುವ 2020ರ ಒಲಿಂಪಿಕ್ ಗೇಮ್ಸ್ ನ ಹೊಸ ದಿನಾಂಕವನ್ನು ನಾವು ಬೆಂಬಲಿಸುತ್ತೇವೆ. ಇದು ನಮ್ಮ ಅಥ್ಲೀಟ್‌ಗಳಿಗೆ ತರಬೇತಿ ನಡೆಸಲು ಅವಶ್ಯವಿರುವ ಸಮಯಾವಕಾಶವನ್ನು ನೀಡಿದೆ. ಪ್ರತಿಯೊಬ್ಬರು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 2022ರ ಹೊಸ ದಿನಾಂಕದೊಂದಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಸಂಘಟಕರೊಂದಿಗೆ ನಾವು ಕೆಲಸ ಮಾಡಲಿದ್ದೇವೆ ಎಂದು ವಿಶ್ವ ಅಥ್ಲೆಟಿಕ್ಸ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News