ಲಾಕ್‍ಡೌನ್: ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದರೆ ಸಂಪರ್ಕಿಸಿ; ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು

Update: 2020-04-01 18:13 GMT

ಬೆಂಗಳೂರು, ಎ.1: ಕೊರೋನ ವೈರಸ್‍ನಿಂದಾಗಿ ರಾಜ್ಯ ಲಾಕ್‍ಡೌನ್ ಆಗಿದ್ದು, ಈ ವೇಳೆಯಲ್ಲಿ ಮಹಿಳೆಯರು ಮನೆಯಲ್ಲಿಯೇ ಮನೆ ಕೆಲಸದ ಜೊತೆಗೆ ಕಚೇರಿ ಕೆಲಸವನ್ನೂ ಮಾಡುತ್ತಿದ್ದಾರೆ. ಹಾಗೊಂದು ಬಾರಿ ಮಹಿಳೆಯರು ಕಿರುಕುಳಕ್ಕೆ ಒಳಗಾದಲ್ಲಿ ಅಥವಾ ಸಂಕಷ್ಟಕ್ಕೆ ಸಿಲುಕಿದರೆ ತಮ್ಮನ್ನು ನೇರವಾಗಿ ಸಂಪರ್ಕಿಸಬಹುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.

ಮಹಿಳೆಯರಿಗೆ ಧೈರ್ಯ ತುಂಬುವ ಕಾರ್ಯದಲ್ಲಿ ತೊಡಗಿರುವ ಆಯೋಗ, ಲಾಕ್‍ಡೌನ್ ವೇಳೆಯಲ್ಲಿ ಮಹಿಳೆಯರೊಂದಿಗೆ ಹಿರಿಯರು ಹಾಗೂ ಪುರುಷರು ಸಂವೇದನೆಯೊಂದಿಗೆ ವರ್ತಿಸಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಆಯೋಗದ ಮೂಲಕ ಮನವಿ ಮಾಡಿದ್ದಾರೆ.

ಒಂದು ವೇಳೆ ಸಮಸ್ಯೆಗಳು ಎದುರಾದಲ್ಲಿ ಈ ಮೇಲೆ Kscwbang123@gmail.com ಮೂಲಕ ಆಪ್ತ ಸಮಾಲೋಚನೆ ಅಥವಾ ಕಾನೂನು ಸಲಹೆ ಪಡೆದುಕೊಳ್ಳಬಹುದು ಎಂದು ಸೂಚಿಸಿದೆ. ಇದರ ಹೊರತಾಗಿಯೂ ತುರ್ತು ಅಗತ್ಯವಿದ್ದಲ್ಲಿ ಮೊಬೈಲ್ 9481004361 ಮೂಲಕ ತಮ್ಮನ್ನು ಸಂಪರ್ಕಿಸಬಹುದು ಎಂದು ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News