ಮಂಗಳಮುಖಿಯರಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಯುವಕರ ತಂಡ

Update: 2020-04-01 18:14 GMT

ಬೆಂಗಳೂರು, ಎ.1: ಕೊರೋನ ವೈರಸ್ ತಡೆಗಟ್ಟಲು ಮುಂಜಾಗ್ರತ ಕ್ರಮವಾಗಿ ದೇಶದಲ್ಲಿ ಲಾಕ್‍ಡೌನ್ ಹೇರಲಾಗಿದ್ದರಿಂದ ಸಾವಿರಾರು ಜನ ಒಂದೊತ್ತಿನ ಊಟವಿಲ್ಲದೇ ಪರದಾಡುತ್ತಿದ್ದಾರೆ. ಮಂಗಳಮುಖಿಯರ ಪಾಡು ಸಹ ಹೇಳತೀರದು. ಕಳೆದ ಒಂದು ವಾರದಿಂದ ಭಿಕ್ಷಾಟನೆ ಇಲ್ಲದೇ ಕಂಗೆಟ್ಟಿದ್ದ ಮಂಗಳಮುಖಿಯರು ಆಹಾರಕ್ಕಾಗಿ ಪರಿತಪಿಸುತ್ತಿದ್ದಾರೆ.

ಯಾರಾದರೂ ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮಂಗಳಮುಖಿಯರು ಮನವಿ ಮಾಡಿದ್ದರು. ಸುದ್ದಿ ತಿಳಿದ ಕೂಡಲೇ ನೆಲಮಂಗಲಕ್ಕೆ ಆಗಮಿಸಿದ ಅಂದರಹಳ್ಳಿ ಗೋಪಾಲ್ ಮತ್ತು ತಂಡ ಮಂಗಳಮುಖಿಯರಿಗೆ ಊಟದ ವ್ಯವಸ್ಥೆ ಮಾಡಿ ಧೈರ್ಯ ತುಂಬಿದ್ದಾರೆ.

ಲಾಕ್‍ಡೌನ್ ಮುಗಿಯುವವರೆಗೂ ಮೂರು ಹೊತ್ತು ಊಟ ಕೊಡುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಮಂಗಳಮುಖಿಯರು ಯುವಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮೂರು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದೆವು. ಭಿಕ್ಷಾಟನೆಗೆ ಕೂಡ ಈಗ ನಮಗೆ ಅವಕಾಶ ಇಲ್ಲ. ಹೀಗಾಗಿ, ಜೀವನ ನಡೆಸುವುದು ಕಷ್ಟವಾಗಿದೆ ಎಂದು ಇದೇ ವೇಳೆ ತಮ್ಮ ನೋವು ತೋಡಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News