ಬೆಂಗಳೂರು ವಿವಿ: ಶುಲ್ಕ ಪಾವತಿ ದಿನಾಂಕ ಮುಂದೂಡಿಕೆ

Update: 2020-04-03 17:07 GMT

ಬೆಂಗಳೂರು, ಎ.3: ಕೊರೋನ ಲಾಕ್​ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಆನ್ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿದ್ದು, ಪರೀಕ್ಷಾ ಶುಲ್ಕ ಪಾವತಿ ದಿನಾಂಕವನ್ನು ಮುಂದೂಡಿದೆ.

ಪರೀಕ್ಷೆ ಶುಲ್ಕ ದಿನಾಂಕವನ್ನು ವಿಶ್ವ ವಿದ್ಯಾನಿಲಯದ ಪುನಾರಂಭಗೊಂಡ ನಂತರ ಪ್ರಕಟಿಸಲಾಗುವುದು. ಅಲ್ಲಿಯವರೆಗೂ ವಿದ್ಯಾರ್ಥಿಗಳು ಮನೆಯಲ್ಲಿಯೇ ವ್ಯಾಸಂಗದ ಕಡೆ ಹೆಚ್ಚು ಗಮನಹರಿಸಬೇಕು ಎಂದು ವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಎಂದು ತಿಳಿಸಿದ್ದಾರೆ.

ಜೂಮ್ ತಂತ್ರಾಂಶ ಬಳಸುವ ಮೂಲಕ ಆನ್ಲೈನ್ ತರಗತಿಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ವ್ಯತ್ಯಯ ಆಗದಂತೆ ವಿಭಾಗದ ಮುಖ್ಯಸ್ಥರು ಕ್ರಮ ಕೈಗೊಂಡಿದ್ದರು. ವಿದ್ಯಾರ್ಥಿಗಳಿಂದ ಆನ್ಲೈನ್ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, 90 ರಷ್ಟು ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೆ ನೋಂದಾಯಿಸಿಕೊಂಡಿರುವುದಾಗಿ ಕುಲಪತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News