ಭಾರತದಲ್ಲಿ ನಡೆಯಬೇಕಿದ್ದ ಫಿಫಾ ಅಂಡರ್-17 ವಿಶ್ವಕಪ್ ಮುಂದೂಡಿಕೆ

Update: 2020-04-04 04:48 GMT

ಹೊಸದಿಲ್ಲಿ,ಎ.4: ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿ ಈ ವರ್ಷದ ನವೆಂಬರ್‌ನಲ್ಲಿ ನಡೆಯಬೇಕಾಗಿದ್ದ ಅಂಡರ್-17 ಮಹಿಳಾ ವಿಶ್ವಕಪ್ ಟೂರ್ನಿಯನ್ನು ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಶನಿವಾರ ಮುಂದೂಡುವ ನಿರ್ಧಾರವನ್ನು ಪ್ರಕಟಿಸಿದೆ.

ಮಹಿಳಾ ವಯೋಮಿತಿಯ ವಿಶ್ವಕಪ್ ಟೂರ್ನಿಯು ನವೆಂಬರ್ 2ರಿಂದ 21ರ ತನಕ ಭಾರತದ ಐದು ತಾಣಗಳಾದ ಕೋಲ್ಕತಾ, ಗುವಾಹಟಿ, ಭುವನೇಶ್ವರ, ಅಹ್ಮದಾಬಾದ್ ಹಾಗೂ ನವಿ ಮುಂಬೈನಲ್ಲಿ ನಿಗದಿಯಾಗಿತ್ತು. ಟೂರ್ನಿಯಲ್ಲಿ ಒಟ್ಟು 16 ತಂಡಗಳು ಸ್ಪರ್ಧೆಯಲ್ಲಿದ್ದವು. ಆತಿಥೇಯ ಭಾರತ ನೇರವಾಗಿ ಅರ್ಹತೆ ಪಡೆದಿತ್ತು. ಭಾರತ ಇದೇ ಮೊದಲ ಬಾರಿ ಅಂಡರ್-17 ಮಹಿಳಾ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದಿತ್ತು.

ಕೋವಿಡ್-19ರಿಂದ ಉಂಟಾಗುವ ಸಮಸ್ಯೆಯನ್ನು ನಿಭಾಯಿಸಲು ಫಿಫಾ ಕೌನ್ಸಿಲ್ ಇತ್ತೀಚೆಗೆ ರಚಿಸಿದ್ದ ಫಿಫಾ ಕಾನ್ಫಡರೇಶನ್ ಕಾರ್ಯಕಾರಿ ಗುಂಪು ಫಿಫಾ ಅಂಡರ್-17 ವಿಶ್ವಕಪ್‌ನ್ನು ಮುಂದೂಡುವ ನಿರ್ಧಾರವನ್ನು ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News