ಸೌದಿ: ಕೊರೋನವೈರಸ್‌ ಗೆ ನಾಲ್ವರು ಬಲಿ

Update: 2020-04-04 17:13 GMT
ಸಾಂದರ್ಭಿಕ ಚಿತ್ರ

ರಿಯಾದ್, ಎ.4: ಸೌದಿ ಅರೇಬಿಯದಲ್ಲಿ ಶನಿವಾರ ನಾಲ್ವರು ಕೊರೋನ ವೈರಸ್‌ನಿಂದ ಮೃತಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 25ಕ್ಕೇರಿದೆ.

ಸೋಂಕು ಹರಡುವುದನ್ನು ತಡೆಯುವ ಪ್ರಯತ್ನವಾಗಿ ದಮಾಂ, ಖತೀಫ್, ತಾಯೀಫ್ ಪ್ರಾಂತ್ಯಗಳಲ್ಲಿ ಅಪರಾಹ್ನ 3 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಘೋಷಿಸಲಾಗಿದೆ. ಅಗತ್ಯ ಸಾಮಗ್ರಿಗಳ ಖರೀದಿಗೆ ತೆರಳಲು ಒಂದು ಮನೆಯಲ್ಲಿ ಓರ್ವ ವ್ಯಕ್ತಿಗಷ್ಟೇ ಅನುಮತಿ ನೀಡಲಾಗಿದೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸದೆ ಇದ್ದರೂ, ಅದರ ಉದ್ಯೋಗಿಗಳ ವೇತನ ತಡೆಹಿಡಿಯಕೂಡದೆಂದು ಸೌದಿ ಮಾನವಸಂಪನ್ಮೂಲ ಹಾಗೂ ಸಮುದಾಯ ಸಚಿವಾಲಯ ತಿಳಿಸಿದೆ. ಸೌದಿಯಾದ್ಯಂತ ಒಟ್ಟು 2,039 ಮಂದಿಗೆ ಸೋಂಕು ತಗಲಿದ್ದು, 351 ಮಂದಿ ಗುಣರಮುಖರಾಗಿದ್ದಾರೆಂದು ಅದು ತಿಳಿಸಿದೆ.

ಈ ಮಧ್ಯೆ ಯುಎಇನಲ್ಲಿ ವಾಸ್ತವ್ಯ ವೀಸಾವನ್ನು ಹೊಂದಿರುವವರು ಸೇರಿದಂತೆ ವಿದೇಶಿಯರಿಗೆ ದೇಶವನ್ನು ಪ್ರವೇಶಿಸಲು ಇರುವ ನಿರ್ಬಂಧವನ್ನು ಎರಡು ವಾರಗಳವರೆಗೆ ವಿಸ್ತರಿಸಲಾಗಿದೆ. ಯುಇಎನಲ್ಲಿ ಈವರೆಗೆ 1024 ಮಂದಿಗೆ ಸೋಂಕು ದೃಢಪಟ್ಟಿದ್ದು, ಸಾವಿನ ಸಂಖ್ಯೆ 8ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News