×
Ad

ಗ್ರಾಮೀಣ ಭಾಗದ ಜನರಿಗೆ ಕೊರೋನ ಚಿಕಿತ್ಸೆ ನೀಡಲು ರೈಲ್ವೆ ಇಲಾಖೆ ಸಜ್ಜು: ಸುರೇಶ್ ಅಂಗಡಿ

Update: 2020-04-05 22:54 IST

ಬೆಂಗಳೂರು, ಎ.5: ಕೊರೋನ ವೈರಸ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಹಾಗೂ ರೈಲು ಸಂಪರ್ಕವಿರುವ ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸೆ ಒದಗಿಸಲು ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದು ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.

ನಿರುಪಯುಕ್ತ 20 ಸಾವಿರ ರೈಲ್ವೆ ಬೋಗಿಗಳನ್ನು ಕೊರೋನ ಚಿಕಿತ್ಸೆಗಾಗಿ ಸಜ್ಜಗೊಳಿಸುತ್ತಿದ್ದು, ಇಂತಹ ಬೋಗಿಗಳಲ್ಲಿ ಎಲ್ಲ ರೀತಿಯ ವೈದ್ಯಕೀಯ ಸಲಕರಣೆಗಳನ್ನು ಒದಗಿಸಲಾಗುವುದು. ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸೆ ನೀಡಲು ರೈಲ್ವೆ ಹಗಲಿರುಳು ಶ್ರಮಿಸುತ್ತಿದೆ ಎಂದಿದ್ದಾರೆ.

ಕೊರೋನ ವೈರಸ್ ನಿಯಂತ್ರಣ ಉದ್ದೇಶದಿಂದ ಕೇಂದ್ರ ಸರಕಾರದ ವಿವಿಧ ಇಲಾಖೆಗಳು ಕೈಗೊಂಡಿರುವ ಕಾರ್ಯಕ್ರಮಗಳಿಗೆ ರೈಲ್ವೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೊರೋನ ವೈರಸ್ ನಿಯಂತ್ರಣಕ್ಕಾಗಿ ದೇಶದಲ್ಲಿ 20 ಸಾವಿರ ರೈಲು ಬೋಗಿಗಳನ್ನು ಮಾರ್ಪಾಡು ಮಾಡಲಾಗಿದ್ದು, 3.2 ಲಕ್ಷ ಐಸೋಲೇಷನ್ ವಾರ್ಡ್‍ಗಳನ್ನು ಸಿದ್ಧಪಡಿಸಲಾಗಿದೆ. ಇಲಾಖೆ ತನ್ನ 16 ವಲಯಗಳಿಗೆ ಕೂಡ ನಿಗದಿತ ಪ್ರಮಾಣದಲ್ಲಿ ಬೋಗಿಗಳನ್ನು ಕಾಯ್ದಿರಿಸಲು ಸೂಚಿಸಿದೆ.

ಈಗಾಗಲೇ ಪ್ರತಿ ಬೋಗಿಗಳಲ್ಲಿ 16 ಹಾಸಿಗೆಗಳಿದ್ದು, ಎಲ್ಲ ರೀತಿಯ ವೈದ್ಯಕೀಯ ಸಾಧನಗಳನ್ನು ಕೂಡ ಇರಿಸಲಾಗಿದೆ. ಆಸ್ಪತ್ರೆ ಕೊಠಡಿಗಳಂತೆಯೇ ಸ್ವಚ್ಛತೆ ಕೂಡ ಕಾಪಾಡಿಕೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News