ಟ್ರಂಪ್ ಪ್ರತೀಕಾರದ ಮಾತಿನ ಬೆನ್ನಿಗೇ ಮಲೇರಿಯಾ ನಿರೋಧಕ ಔಷಧ ರಫ್ತು ಮೇಲಿನ ನಿಷೇಧ ತೆರವುಗೊಳಿಸಿದ ಭಾರತ

Update: 2020-04-07 06:55 GMT

 ಹೊಸದಿಲ್ಲಿ, ಮಾ.7: ಭಾರತ ಮಲೇರಿಯಾ ನಿರೋಧಕ ಔಷಧಿ ಹೈಡ್ರಾಕ್ಸಿಕ್ಲೋರೊಕ್ವಿನ್ ಸರಬರಾಜು ಮಾಡದೇ ಇದ್ದರೆ ಪ್ರತೀಕಾರ ತೀರಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಕೆಲವೇ ಗಂಟೆಗಳ ಬಳಿಕ ಮಲೇರಿಯಾ ನಿರೋಧಕ ಔಷಧದ ರಫ್ತು ಮೇಲಿನ ನಿಷೇಧವನ್ನು ಭಾಗಶಃ ತೆಗೆದು ಹಾಕಲು ಕೇಂದ್ರ ಸರಕಾರ ಮುಂದಾಗಿದೆ.

 "ಕೋವಿಡ್-19ರಿಂದ ಜರ್ಝರಿತವಾಗಿರುವ ಕೆಲವು ದೇಶಗಳಿಗೆ ಮಲೇರಿಯಾ ನಿರೋಧಕ ಔಷಧವನ್ನು ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಒಂದು ಜವಾಬ್ದಾರಿಯುತ ಸರಕಾರವಾಗಿ ನಮ್ಮ ಜನರ ಅವಶ್ಯಕತೆಗಾಗಿ ಸಾಕಷ್ಟು ಔಷಧ ಸಂಗ್ರಹ ಇರುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಮೊದಲ ಬಾಧ್ಯತೆಯಾಗಿದೆ. ಎಲ್ಲ ಆಕಸ್ಮಿಕಗಳಿಗೆ ಔಷಧ ಲಭ್ಯತೆಯನ್ನು ಖಚಿತಪಡಿಸಿದ ಬಳಿಕ ಮಲೇರಿಯಾ ನಿರೋಧಕ ಔಷಧ ಮೇಲಿನ ನಿರ್ಬಂಧ ತೆಗೆದುಹಾಕಲಾಗಿದೆ'' ಎಂದು ವಿದೇಶಾಂಗ ವ್ಯವಹಾರ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News