ಲಾಕ್ ಡೌನ್ ಅವಧಿಯಲ್ಲಿ ಬಿಡುಗಡೆಯಾದ ಕೈದಿಗಳಿಗೆ ಮನೆ ಸೇರಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಸುಪ್ರೀಂ ಸೂಚನೆ

Update: 2020-04-08 06:42 GMT

ಹೊಸದಿಲ್ಲಿ, ಎ.8:  ಕೋವಿಡ್ -19 ಕಾರಣದಿಂದಾಗಿ ದೇಶಾದ್ಯಂತ ಜಾರಿಯಾಗಿರುವ ಲಾಕ್‌ಡೌನ್  ನಡುವೆ ಬಿಡುಗಡೆಯಾಗುವ  ಕೈದಿಗಳಿಗೆ ಸುರಕ್ಷಿತವಾಗಿ ಮನೆ ತಲುಪುವಂತಾಗಲು ಪ್ರಯಾಣಕ್ಕೆ ಸೂಕ್ತ  ವಾಹನಗಳ  ವ್ಯವಸ್ಥೆ  ಕಲ್ಪಿಸುವಂತೆ  ಸುಪ್ರೀಂ ಕೋರ್ಟ್   ಮಂಗಳವಾರ  ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶ ನೀಡಿದೆ.

ಲಾಕ್ ಡೌನ್ ಅವಧಿಯಲ್ಲಿ  ಬಿಡುಗಡೆಯಾಗುವ ಕೈದಿಗಳಿಗೆ ತಾತ್ಕಾಲಿಕ ಆಶ್ರಯ ಮನೆಗಳಲ್ಲಿ ಉಳಿಯುವ ಆಯ್ಕೆಯನ್ನು ನೀಡಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ, ಎಲ್.ಎ.ನಾಗೇಶ್ವರ ರಾವ್ ನೇತೃತ್ವದ ನ್ಯಾಯಪೀಠ ತಿಳಿಸಿದೆ.

 ಉನ್ನತ ನ್ಯಾಯಾಲಯವು  ನೇಮಕ ಮಾಡಿರುವ ಅಮಿಕಸ್ ಕ್ಯೂರಿ   ಮತ್ತು ಹಿರಿಯ ವಕೀಲ ದುಶ್ಯಂತ್ ದೇವ್ ಅವರು  ಬಿಡುಗಡೆಯಾದ ಕೈದಿಗಳು ತಮ್ಮ ಮನೆಗಳನ್ನು ತಲುಪಲು ಯಾವುದೇ ಮಾರ್ಗವಿಲ್ಲದ ಕಾರಣ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ನ್ಯಾಯಾಲಯದ ಗಮನ ಸೆಳೆದರು.

"ಲಾಕ್ ಡೌನ್  ಸಂದರ್ಭದಲ್ಲಿ  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಿಡುಗಡೆಯಾದ ಎಲ್ಲಾ ಕೈದಿಗಳು  ಸಿಕ್ಕಿಹಾಕಿಕೊಳ್ಳದಂತೆ   ನೋಡಿಕೊಳ್ಳಬೇಕೆಂದು ಕೇಂದ್ರ   ಸರಕಾರಕ್ಕೆ ನಿರ್ದೇಶಿಸುವುದು ಸೂಕ್ತವೆಂದು ನಾವು ಪರಿಗಣಿಸುತ್ತೇವೆ ಮತ್ತು ಬಿಡುಗಡೆ ಕೈದಿಗಳು ತಮ್ಮ ಮನೆಗಳನ್ನು ತಲುಪಲು ಸಾರಿಗೆ ವ್ಯವಸ್ಥೆ ನೀಡಲಾಗುತ್ತದೆ ಅಥವಾ ಉಳಿಯಲು ಆಯ್ಕೆಯನ್ನು ನೀಡಲಾಗುತ್ತದೆ.  ಲಾಕ್ ಡೌನ್ ಅವಧಿಗೆ ತಾತ್ಕಾಲಿಕ ಆಶ್ರಯ ಮನೆಗಳನ್ನು ಕಲ್ಪಿಸಲಾಗುತ್ತದೆ  " ಎಂದು ನ್ಯಾಯಪೀಠ ಹೇಳಿದೆ.

ಈ ಉದ್ದೇಶಕ್ಕಾಗಿ, ಕೇಂದ್ರ ಸರಕಾರ  ವಿಪತ್ತು ನಿರ್ವಹಣಾ ಕಾಯ್ದೆ 2005, ಅಥವಾ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಸೂಕ್ತ ನಿರ್ದೇಶನಗಳನ್ನು ನೀಡಬಹುದು ಎಂದು ಅದು ಹೇಳಿದೆ.

"ಲಾಕ್ ಡೌನ್ ಸಮಯದಲ್ಲಿ ರಾಜ್ಯಗಳು  ಕೇಂದ್ರಾಡಳಿತ ಪ್ರದೇಶಗಳಲ್ಲಿ  ಬಿಡುಗಡೆಯಾದ ಕೈದಿಗಳಿಗೆ ತಮ್ಮ ಮನೆಗಳನ್ನು ತಲುಪಲು ಸುರಕ್ಷಿತ ಸಾರಿಗೆಯನ್ನು ಒದಗಿಸಲು ಪೊಲೀಸ್ ಮಹಾನಿರ್ದೇಶಕರ ಮೂಲಕ ಖಚಿತಪಡಿಸಿಕೊಳ್ಳಬೇಕು ಎಂದು ನಾವು ನಿರ್ದೇಶಿಸುತ್ತೇವೆ. ಈ ಸಮಯದಲ್ಲಿ ಅವರಿಗೆ ತಾತ್ಕಾಲಿಕ ಮನೆಗಳಲ್ಲಿ ಉಳಿಯಲು ಒಂದು ಆಯ್ಕೆಯನ್ನು ಸಹ ನೀಡಲಾಗುವುದು. "ಎಂದು ನ್ಯಾಯಪೀಠ ಹೇಳಿದೆ.

ಮಾರ್ಚ್ 23 ರಂದು ಉನ್ನತ ನ್ಯಾಯಾಲಯವು ಎಲ್ಲಾ ರಾಜ್ಯಗಳು ಮತ್ತು ಯುಟಿಗಳಿಗೆ ಉನ್ನತ ಮಟ್ಟದ ಸಮಿತಿಗಳನ್ನು ರಚಿಸುವಂತೆ ಸೂಚಿಸಿತ್ತು . ಕಾರಾಗೃಹ ಜನದಟ್ಟಣೆ ಗಂಭೀರ ಕಾಳಜಿಯ ವಿಷಯವಾಗಿದೆ ಎಂದು ಹೇಳಿತ್ತು.

ಭಾರತದ ಸಂವಿಧಾನದ 21 ನೇ ಪರಿಚ್ಚೇದದ  ನಿಬಂಧನೆಗಳಿಗೆ ಸಂಬಂಧಿಸಿದಂತೆ, ಕಾರಾಗೃಹಗಳಲ್ಲಿ ಕೊರೋನನವೈರಸ್ ಸೊಂಕು  ಹರಡುವುದನ್ನು ನಿಯಂತ್ರಿಸುವುದು ಕಡ್ಡಾಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಅಪರಾಧದ ಸ್ವರೂಪ, ಅವನಿಗೆ ಅಥವಾ ಅವಳಿಗೆ ಎಷ್ಟು ವರ್ಷ ಶಿಕ್ಷೆ ವಿಧಿಸಲಾಗಿದೆ ಅಥವಾ ಅಪರಾಧದ ತೀವ್ರತೆಗೆ ಅನುಗುಣವಾಗಿ ಬಿಡುಗಡೆ ಮಾಡಬೇಕಾದ ಕೈದಿಗಳ ವರ್ಗವನ್ನು ನಿರ್ಧರಿಸಲು ಉನ್ನತ ಅಧಿಕಾರ ಸಮಿತಿಗೆ ಅಧಿಕಾರವಿದೆ  ಎಂದು ಉನ್ನತ ನ್ಯಾಯಾಲಯ ಹೇಳಿದೆ.

ಮತ್ತೊಂದು ವಿಷಯದಲ್ಲಿ ನ್ಯಾಯಾಲಯವು ರಚಿಸಿರುವ ಅಂಡರ್ಟ್ರಿಯಲ್ ರಿವ್ಯೂ ಕಮಿಟಿ  ಪ್ರತಿ ವಾರ ಸಭೆ ಸೇರಿ ಸಂಬಂಧಪಟ್ಟ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ  ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅದು ನಿರ್ದೇಶಿಸಿದೆ.

ಸೋಂಕಿನ ಸಾಧ್ಯತೆ ಕಂಡುಬಂದರೆ ಅನಾರೋಗ್ಯದ ವ್ಯಕ್ತಿಯನ್ನು ನೋಡಲ್ ವೈದ್ಯಕೀಯ ಸಂಸ್ಥೆಗೆ ಸ್ಥಳಾಂತರಿಸುವಲ್ಲಿ ಯಾವುದೇ ವಿಳಂಬವಾಗಬಾರದು ಮತ್ತು ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚಿಸಬೇಕು ಎಂದು ಅದು ನಿರ್ದೇಶಿಸಿತ್ತು.

ಮಾರ್ಚ್ 16 ರಂದು  ಉನ್ನತ ನ್ಯಾಯಾಲಯವು ದೇಶಾದ್ಯಂತ ಕಾರಾಗೃಹಗಳ ಜನಸಂದಣಿಯನ್ನು ಅರಿತುಕೊಂಡಿದೆ ಮತ್ತು ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಜೈಲು ಕೈದಿಗಳು ಸಾಮಾಜಿಕ ದೂರವನ್ನು ಕಾಯ್ದುಕೊಳ್ಳುವುದು ಕಷ್ಟ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News