ಗರ್ಭಿಣಿಯರಿಗೆ ನೆರವಾಗುವ ಬಿಬಿಎಂಪಿ ಮೊಬೈಲ್ ಹೆಲ್ತ್ ಯೂನಿಟ್

Update: 2020-04-08 17:18 GMT

ಬೆಂಗಳೂರು, ಎ.8: ಕೊರೋನ ವೈರಸ್ ಹರಡುವುದನ್ನು ತಡೆಯಲು ಇರುವ ಒಂದೇ ಪರಿಹಾರ  ಲಾಕ್‍ಡೌನ್. ಆದರೆ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಗರದ ಅನೇಕ ಗರ್ಭಿಣಿಯರು ಸಂಕಷ್ಟಕ್ಕಿಡಾಗಿದ್ದಾರೆ. ಅವರಿಗೆ ಪ್ರತಿ ವಾರ ಚೆಕಪ್, ಸ್ಕ್ಯಾನಿಂಗ್ ಹೀಗೆ ವೈದ್ಯರ ಭೇಟಿ ಕಡ್ಡಾಯವಿರುತ್ತದೆ. ಆದರೆ ಆಟೋ, ಕ್ಯಾಬ್ ಇಲ್ಲದೇ ಆಸ್ಪತ್ರೆಗೆ ತೆರಳಲು ಪರದಾಡುತ್ತಿದ್ದಾರೆ.  ಬಿಬಿಎಂಪಿ ಮೊಬೈಲ್ ಹೆಲ್ತ್ ಯೂನಿಟ್ ಈಗ ಈ ಗರ್ಭಿಣಿಯರ ಈ ಸಮಸ್ಯೆಯನ್ನು  ದೂರ ಮಾಡಿದೆ.

ಮಂಗಳವಾರ ಸಂಜೆ 19 ವರ್ಷದ ಗಾಯತ್ರಿ ಎಂಬ 3 ತಿಂಗಳ ಗರ್ಭಿಣಿ ಆಸ್ಪತ್ರೆಗೆ ಹೋಗಲು ಪರದಾಡುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಅಪಾಯಿಂಟ್‍ಮೆಂಟ್ ತೆಗೆದುಕೊಂಡು ಹೋಗಲಾಗದೇ ಗೋಳಾಡುತ್ತಿದ್ದರು. ಆಗ ಬಿಬಿಎಂಪಿ ಹೆಲ್ತ್ ಯೂನಿಟ್ ಅವರ ಸಹಾಯಕ್ಕೆ ಧಾವಿಸಿದೆ. ಈಗ ಮಹಿಳೆಗೆ ಸೂಕ್ತ ಚಿಕಿತ್ಸೆ ದೊರೆತು ನೆಮ್ಮದಿಯಾಗಿದ್ದಾರೆ.

ಸದ್ಯ ನಗರದಲ್ಲಿ ಕೇವಲ 6 ಮೊಬೈಲ್ ವೈದ್ಯಕೀಯ ಘಟಕಗಳಿದ್ದು, ಮತ್ತಷ್ಟು ಹೆಚ್ಚಿಸುವ ಅವಶ್ಯಕತೆ ಇದೆ. ಅವುಗಳು ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ವಾಸಿಸುವ ಸ್ಥಳಗಳಲ್ಲಿ ಕೆಲಸ ಮಾಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News