'ಕೋವಿಡ್-19 ಕಿಸಾನ್ ಕಾರ್ಯಪಡೆ' ರಚನೆ ಕೋರಿ ಮುಖ್ಯ ಕಾರ್ಯದರ್ಶಿಗೆ ಸಚಿನ್ ಮೀಗಾ ಪತ್ರ

Update: 2020-04-10 14:25 GMT

ಬೆಂಗಳೂರು, ಎ.10: ರೈತರ ಹಾಗೂ ಗ್ರಾಹಕರ ನಡುವೆ ಸೇತುವೆ ನಿರ್ಮಿಸಲು ಕರ್ನಾಟಕ ಕಿಸಾನ್ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ತೀರ್ಮಾನ ಕೈಗೊಂಡಂತೆ, ಪ್ರಾಯೋಗಿಕವಾಗಿ ಐದು ಜಿಲ್ಲೆಗಳಲ್ಲಿ 'ಕೋವಿಡ್-19 ಕಿಸಾನ್ ಕಾರ್ಯಪಡೆ' ಕಾರ್ಯನಿರ್ವಹಿಸಲು ಅನುಮತಿ ಕೋರಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಪತ್ರ ಬರೆದಿದ್ದಾರೆ.

ಕಿಸಾನ್ ಕಾರ್ಯಪಡೆ ನಿಯಮ: ರೈತರಿಂದ ಮಾರುಕಟ್ಟೆ ದರಕ್ಕೆ ನೇರವಾಗಿ ಹಣ್ಣು ಹಾಗೂ ತರಕಾರಿ ಖರೀದಿಸುವುದು, ಕಾರ್ಯಪಡೆ ರೈತರಿಂದ ಖರೀದಿಸಿದ ಹಣ್ಣು ಹಾಗೂ ತರಕಾರಿಯನ್ನು ಮಾರುಕಟ್ಟೆ ದರಕ್ಕೆ ನೇರವಾಗಿ ಗ್ರಾಹಕರ ಮನೆಗಳಿಗೆ ವಿತರಿಸುವುದು, ರೈತರಿಂದ ಕಡಿಮೆ ದರಕ್ಕೆ ಮಧ್ಯವರ್ತಿಗಳು ಖರೀದಿಸಿ, ಗ್ರಾಹಕರಿಗೆ ದುಪ್ಪಟ್ಟು ದರಕ್ಕೆ ಮಾರುವುದನ್ನು ತಡೆಯುವ ಉದ್ದೇಶ, ಖರೀದಿಸಿದ ಹಣ್ಣು ಹಾಗೂ ತರಕಾರಿಗಳು ಹಾಳಾದರೆ ಅದರ ನಷ್ಟವನ್ನು ಕರ್ನಾಟಕ ಕಿಸಾನ್ ಕಾಂಗ್ರೆಸ್ ಕಾರ್ಯಪಡೆ ಭರಿಸುತ್ತದೆ.

ಪ್ರಾಯೋಗಿಕ ಜಿಲ್ಲೆಗಳು: ಬಾಗಲಕೋಟೆ ಜಿಲ್ಲೆಯ ಕಾರ್ಯಪಡೆ ಉಸ್ತುವಾರಿ ಸಿದ್ದು ಕೊಣ್ಣೂರ್, ನಂದಕುಮಾರ್ ಪಾಟೀಲ್, ಗೋವಿಂದಪ್ಪ ಗುಜ್ಜನವರ್, ಗೋವಿಂದಪ್ಪ ಪಾಟೀಲ್, ಬೆಳಗಾವಿ ಜಿಲ್ಲೆಯ ಕಾರ್ಯಪಡೆ ಉಸ್ತುವಾರಿ ದಸ್ತಗೀರ್ ಕಾಗವಾಡೆ, ಮಹೇಶ್ ತಮ್ಮನವರ್, ದಾವಣಗೆರೆ ಜಿಲ್ಲೆಯ ಕಾರ್ಯಪಡೆ ಉಸ್ತುವಾರಿ ಬಸವರಾಜ್ ವಿ.ಶಿವಗಂಗಾ, ಮನೋಜ್, ಮಂಡ್ಯ ಜಿಲ್ಲೆಯ ಕಾರ್ಯಪಡೆ ಉಸ್ತುವಾರಿ ಮೋಹನ್ ಕುಮಾರ್, ರಮೇಶ್ ಚಿನ್ನುರಲಿ, ರಾಯಚೂರು ಜಿಲ್ಲೆಯ ಕಾರ್ಯಪಡೆ ಉಸ್ತುವಾರಿ ರಮೇಶ್ ಎಂದು ಸಚಿನ್‍ ಮೀಗಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News