ನಾನು ಯಾವಾಗಲೂ ಲಭ್ಯವಿರುತ್ತೇನೆ : ಪ್ರಧಾನ ಮೋದಿ ಸಿಎಂಗಳಿಗೆ ಭರವಸೆ

Update: 2020-04-11 08:18 GMT

 ಹೊಸದಿಲ್ಲಿ, ಎ.11: “ನಾನು. ದಿನದ 24 ಗಂಟೆ.  ವಾರದ ಎಲ್ಲಾ ದಿನಗಳಲ್ಲೂ(24x7 ) ಸೇವೆಗೆ ಲಭ್ಯವಿರುತ್ತೇನೆ. ಯಾವುದೇ ಮುಖ್ಯಮಂತ್ರಿಗಳು ನನ್ನೊಂದಿಗೆ ಮಾತನಾಡಬಹುದು ಮತ್ತು  ಕೋವಿಡ್ 19  ನಿಯಂತ್ರಣಕ್ಕೆ ಸಂಬಂಧಿಸಿ ಸಲಹೆಗಳನ್ನು ಯಾವಾಗ ಬೇಕಾದರೂ ನೀಡಬಹುದು. ನಾವು ಹೆಗಲಿಗೆ ಹೆಗಲು  ಕೊಟ್ಟು ಕೊರೋನವನ್ನು ತೊಲಗಿಸಲು   ಹೋರಾಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಕೊರೋನ ವೈರಸ್ ಸೋಂಕು  ಹರಡುವುದನ್ನು  ತಡೆಯಲು  ಜಾರಿಗೊಳಿಸಲಾದ ಲಾಕ್‌ಡೌನ್ ಅನ್ನು ವಿಸ್ತರಿಸಬೇಕೆ ಎಂದು ಚರ್ಚಿಸಲು ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ  ಪ್ರಧಾನಿ ಮೋದಿ ಮಾತನಾಡಿದರು.

ಮಾಸ್ಕ್  ಧರಿಸಿ  ಕಾನ್ಪರೆನ್ಸ್ ನಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಕೊರೋನ  ವೈರಸ್ ಸೋಂಕು ಹರಡುವುದನ್ನು ತಡೆಗಟ್ಟು ಬಗ್ಗೆ ನಿಮ್ಮ ಸಲಹೆಗಳನ್ನು ನೀಡಬಹುದು ಎಂದು ಪ್ರಧಾನಿ ಮೋದಿ  ಭರವಸೆ ನೀಡಿದರು

ಸಂವಾದದಲ್ಲಿ  ಹಲವು  ಮುಖ್ಯಮಂತ್ರಿಗಳು ಮಾಸ್ಕ್  ಧರಿಸಿ ಕಾಣಿಸಿಕೊಂಡರು.

ಸಾಂಕ್ರಾಮಿಕ ರೋಗವು ಭಾರತದಾದ್ಯಂತ 7400 ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ ಮತ್ತು ಇದುವರೆಗೆ 239 ಜನರನ್ನು ಬಲಿ ತೆಗೆದುಕೊಂಡಿದೆ.

  ಕಾನ್ಫರೆನ್ಸ್ ಮೂಲಕ ಪ್ರಧಾನಿ ಸಿಎಂಗಳೊಂದಿಗೆ ಸಂವಹನ ನಡೆಸುತ್ತಿರುವುದು ಇದು ಮೂರನೇ ಬಾರಿ. ಮಂಗಳವಾರ, ಎಪ್ರಿಲ್ 14 ರಂದು ಕೊನೆಗೊಳ್ಳಲಿರುವ ಮೂರು ವಾರಗಳ ಲಾಕ್‌ಡೌನ್ ಅನ್ನು ವಿಸ್ತರಿಸಬೇಕೆ ಎಂದು ಅವರು ಮುಖ್ಯಮಂತ್ರಿಗಳಿಂದ ಅಭಿಪ್ರಾಯ  ಪಡೆದರು.

ಒಡಿಶಾ ಮತ್ತು ಪಂಜಾಬ್ ಈಗಾಗಲೇ ಲಾಕ್‌ಡೌನ್ ಅನ್ನು ಎಪ್ರಿಲ್ 30 ಕ್ಕೆ ವಿಸ್ತರಿಸಿದ್ದು, ಇತರ ಹಲವು ರಾಜ್ಯಗಳು ಲಾಕ್‌ಡೌನ್ ವಿಸ್ತರಿಸಲು ಬಯಸಿದ್ದೇವೆ ಎಂದು ಹೇಳಿದ್ದಾರೆ.

ಭಾರತದಲ್ಲಿ  ಲಾಕ್‌ಡೌನ್ ಸಾವಿರಾರು ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿಕೊಂಡಿರುವುದರಿಂದ ಅವರ  ಜೀವನ ಮತ್ತು ಜೀವನೋಪಾಯದ ನಡುವೆ ಸಮತೋಲನವನ್ನು ಸಾಧಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳಿಂದ ವೈದ್ಯಕೀಯ ಮೂಲಸೌಕರ್ಯಗಳು ಒತ್ತಡದಲ್ಲಿವೆ.

ಸಭೆಯ ಮುಂದೆ, ಪಶ್ಚಿಮ ಬಂಗಾಳ ಸರ್ಕಾರವು ಪೊಸಿಟಿವ್ ಪ್ರಕರಣಗಳು ಪತ್ತೆಯಾಗಿರುವ 10  ಕೋವಿಡ್  -19 ಹಾಟ್‌ಸ್ಪಾಟ್‌ಗಳು ಮತ್ತು ಕ್ಲಸ್ಟರ್‌ಗಳಲ್ಲಿ ಲಾಕ್‌ಡೌನ್ ವಿಧಿಸಲು ನಿರ್ಧರಿಸಿತು, ಲಾಕ್ ಡೌನ್ ನಿಂದ  ತೀವ್ರವಾಗಿ ಹಾನಿಗೊಳಗಾದ ಬಡ ಕುಟುಂಬಗಳಿಗೆ ನಗದು ವರ್ಗಾವಣೆ ಮಾಡುವಂತೆ  ಮಾಜಿ ವಿತ್ತ ಸಚಿವ ಕಾಂಗ್ರೆಸ್ ಧುರೀಣ  ಪಿ.ಚಿದಂಬರಂ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News