×
Ad

ಎಪ್ರಿಲ್ ಅಂತ್ಯದವರೆಗೂ ಆನ್‍ಲೈನ್ ನಲ್ಲಿ ಉಚಿತ ಫೋಟೊಗ್ರಫಿ ತರಬೇತಿ

Update: 2020-04-11 21:57 IST

ಬೆಂಗಳೂರು, ಎ.11: ನಗರದ ನಿಕಾನ್ ಇಂಡಿಯಾ ಸಂಸ್ಥೆಯು ಏಪ್ರಿಲ್ ತಿಂಗಳ ಅಂತ್ಯದವರೆಗೂ ಆನ್‍ಲೈನ್ ಮೂಲಕ ಉಚಿತ ಫೋಟೊಗ್ರಫಿ ತರಗತಿಗಳನ್ನು ಆಯೋಜಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಕುಮಾರ್, ಲಾಕ್‍ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಉತ್ಸಾಹಿ ತರುಣ, ತರುಣಿಯರಿಗೆ, ಆಸಕ್ತರಿಗೆ ಛಾಯಾಗ್ರಹಣದ ಕೌಶಲಗಳನ್ನು ಹೇಳಿಕೊಡಲಾಗುತ್ತದೆ. ಹೆಸರಾಂತ ಛಾಯಾಗ್ರಾಹಕ ರಘು ರೈ ಅವರು ವಿವಾಹ, ವೈಲ್ಡ್ ಲೈಫ್, ಫೊಕಸ್ ಲೆಂತ್‍ನ ಇಫೆಕ್ಟ್, ಇಂಟೀರಿಯರ್ ಮತ್ತು ಆರ್ಕಿಟೆಕ್ಚರ್, ಸ್ಟ್ರೀಟ್, ಪೋಟ್ರೇಟ್, ಫುಡ್ ಮತ್ತು ಪೆಟ್ ಫೋಟೋಗ್ರಫಿ ಸೇರಿದಂತೆ ಇನ್ನೂ ಹಲವಾರು ವಿಷಯಗಳ ಮೇಲೆ ತರಗತಿಗಳನ್ನು ನಡೆಸಿಕೊಡಲಿದ್ದಾರೆ. ಈ ಉಚಿತ ಆನ್‍ಲೈನ್ ತರಗತಿಗಳನ್ನು ಮನೆಯಲ್ಲಿರುವ ಆಸಕ್ತರು ಕಲಿತು ಫೋಟೊಗ್ರಫಿಯ ಕೌಶಲ್ಯ ರೂಢಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ತರಗತಿಗಳು ನಿಕಾನ್ ಸಂಸ್ಥೆಯ ಅಧಿಕೃತ ಇನ್‍ಸ್ಟಾಗ್ರಾಂ, ಫೇಸ್‍ಬುಕ್ ಮತ್ತು ಯೂಟ್ಯೂಬ್ ಪೇಜ್‍ಗಳಲ್ಲಿ ಲೈವ್ ವಿಡಿಯೋ ಸ್ಟ್ರೀಮಿಂಗ್‍ನಲ್ಲಿ ಲಭ್ಯವಿದೆ. ಬಳಕೆದಾರರು ತಾವು ಹಿಡಿದ ಛಾಯಾಚಿತ್ರಗಳನ್ನು Capture with Nikon ನಲ್ಲಿ ಅಪಲೋಡ್ ಮಾಡಿ ಅತ್ಯುತ್ತಮ ಛಾಯಾಚಿತ್ರಗಳಿಗೆ ಬಹುಮಾನ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News