ಬೆಂಗಳೂರು: ಸಾಮಾಜಿಕ ಅಂತರ ಇಲ್ಲದೆ ರೇಷನ್ ಕಿಟ್‍ಗಾಗಿ ಮುಗಿಬಿದ್ದ ಜನತೆ
Update: 2020-04-15 22:52 IST
ಬೆಂಗಳೂರು, ಎ.15: ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ರೇಷನ್ ಕಿಟ್ ಪಡೆಯಲು, ಸರತಿ ಸಾಲಿನಲ್ಲಿ ನಿಂತ ಘಟನೆ ಬಿಬಿಎಂಪಿ ವ್ಯಾಪ್ತಿಯ ಸಿದ್ದಾಪುರ ವಾರ್ಡ್‍ನ ಲಾಲ್‍ಬಾಗ್ ಸಮೀಪ ಬುಧವಾರ ನಡೆದಿದೆ.
ಬಿಬಿಎಂಪಿ ಈಗಾಗಲೇ ನಗರದ 38ಕ್ಕೂ ಹೆಚ್ಚು ಪ್ರದೇಶಗಳು ಕೊರೋನ ವೈರಸ್ ಹಾಟ್‍ಸ್ಪಾಟ್ ಆಗಿ ಗುರುತಿಸಿಕೊಂಡಿದ್ದರೂ, ಇಲ್ಲಿನ ಜನ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ರೇಷನ್ ಕಿಟ್ ಪಡೆಯಲು ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬೀಳುತ್ತಿರುವುದು ವಿಪರ್ಯಾಸವೇ ಸರಿ.
ಈ ರೀತಿ ಬೇಜವಾಬ್ದಾರಿಯಿಂದ ಬೀದಿಗಿಳಿದು ಮಹಾಮಾರಿ ಕೊರೋನವನ್ನು ಮೈ ಮೇಲೆ ಎಳೆದುಕೊಂಡು, ಮನೆಗಳಿಗೆ ತೆರಳಿದರೆ ಇನ್ನಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎನ್ನುವ ವಿಷಯ ಆತಂಕ ಹುಟ್ಟಿಸಿದೆ.