×
Ad

ಸರಳವಾಗಿ ನೆರವೇರಿದ ನಿಖಿಲ್ - ರೇವತಿ ವಿವಾಹ

Update: 2020-04-17 10:54 IST

ಬೆಂಗಳೂರು, ಎ.17: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪುತ್ರ, ಚಿತ್ರನಟ ನಿಖಿಲ್ ಗೌಡ ಹಾಗೂ ರೇವತಿ ಅವರ ವಿವಾಹವು ರಾಮನಗರ ಜಿಲ್ಲೆ ಕೇತಗಾನಹಳ್ಳಿ ತೋಟದಲ್ಲಿ ಶುಕ್ರವಾರ ಸರಳವಾಗಿ ನೆರವೇರಿತು.

ಈ ಹಿಂದೆ ಅದ್ದೂರಿ ಮದುವೆ ಸಮಾರಂಭಕ್ಕೆ ಸಿದ್ದತೆ ನಡೆದಿತ್ತು. ಆದರೆ, ರಾಜ್ಯದಲ್ಲಿ ಮಾರಕ ಕೊರೋನ ವೈರಸ್ ಸೋಂಕಿನಿಂದ ಆಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ಸರಳ ರೀತಿಯಲ್ಲಿ ಕುಟುಂಬದ ಸದಸ್ಯರ ಸಮ್ಮುಖದಲ್ಲಿಂದು ವಿವಾಹ ನೆರವೇರಿತು.

 ತಾವೆಲ್ಲರೂ ತಾವಿದ್ದ ಸ್ಥಳದಿಂದಲೆ ವಧು-ವರರನ್ಧು ಆಶೀರ್ವಾದ ಮಾಡಬೇಕಾಗಿ  ಮಾಜಿ ಸಿಎಂ ಕುಮಾರಸ್ವಾಮಿ ವಿನಂತಿಸಿದ್ದ ಹಿನ್ನಲೆಯಲ್ಲಿ ಮದುವೆಗೆ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಬೇರೆಯವರು ಯಾರು ಪಾಲ್ಗೊಂಡಿರಲಿಲ್ಲ.

ಮಾಜಿ ಸಿಎಂ ಕುಮಾರಸ್ವಾಮಿ, ಅವರ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಅವರ ಪತ್ನಿ ಚೆನ್ನಮ್ಮ ಸೇರಿದಂತೆ ವಧು ರೇವತಿ ಕುಟುಂಬದ ಸದಸ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News