×
Ad

ಲಾಕ್‍ಡೌನ್: 'ಕರುಣೆಯ ಗೋಡೆ'ಯಲ್ಲಿ ಬಿಸ್ಕತ್, ಹಣ್ಣುಗಳು ಉಚಿತ

Update: 2020-04-17 19:40 IST

ಬೆಂಗಳೂರು, ಎ.17: ಕೊರೋನ ಲಾಕ್‍ಡೌನ್ ಹಿನ್ನೆಲೆ ಆಹಾರ ದೊರೆಯದೆ, ಉಳಿದಿರುವ ನಿರಾಶ್ರಿತರಿಗಾಗಿ ಕರುಣೆಯ ಗೋಡೆ ಎಂಬ ನೂತನ ಯೋಜನೆಯನ್ನು ನಗರದ ಹೊರವಲಯದ ನೆಲಮಂಗಲ ಪೊಲೀಸರು ಚಾಲನೆ ನೀಡಿದ್ದಾರೆ.

ನೆಲಮಂಗಲ ನಗರದ ಬಸ್ ನಿಲ್ದಾಣದ ಬಳಿ ಕರುಣೆಯ ಗೋಡೆಗೆ ಚಾಲನೆ ನೀಡಲಿದ್ದು, ಇಲ್ಲಿ ಬ್ರೆಡ್, ಬಿಸ್ಕತ್, ಹಣ್ಣುಗಳು, ನೀರಿನ ಬಾಟಲಿಗಳನ್ನು ಇಡಲಾಗಿದೆ. ಬಡವರು, ಹಸಿದವರು ಇಲ್ಲಿ ಇಟ್ಟ ಆಹಾರವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ತಮ್ಮಲ್ಲಿರುವ ಅಗತ್ಯ ವಸ್ತುಗಳನ್ನು ಮತ್ತೊಬ್ಬರಿಗೆ ನೀಡುವ ಮೂಲಕ ಬಡವರಿಗೆ ಸಹಾಯ ಮಾಡಬಹುದಾಗಿದೆ.

ಈ ಕರುಣೆ ಗೋಡೆ ಚಾಲನೆ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀನಿವಾಸಯ್ಯ, ಡಿವೈಎಸ್ಪಿ ಮೋಹನ್ ಕುಮಾರ್ ಮತ್ತು ಪಿಎಸ್ಸೈ ಮಂಜುನಾಥ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News