×
Ad

ಬೆಂಗಳೂರು: ಚಿಕನ್‍, ಮಟನ್‍ಗೆ ದರ ನಿಗದಿ ಮಾಡಿದ ಬಿಬಿಎಂಪಿ

Update: 2020-04-17 19:41 IST

ಬೆಂಗಳೂರು, ಎ.17: ಲಾಕ್‍ಡೌನ್‍ನ ಪರಿಣಾಮ ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿಕನ್ ಹಾಗೂ ಮಟನ್ ದರದಲ್ಲಿ ದಿಢೀರನೇ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಮೋಸವಾಗಬಾರದೆಂಬ ಕಾರಣಕ್ಕೆ ನಿರ್ದಿಷ್ಟ ಬೆಲೆ ನಿಗದಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಕೇಜಿ ಕೋಳಿಗೆ 125 ರೂ., ಡ್ರೆಸೆಡ್ ಚಿಕನ್ ಕೇಜಿಗೆ 160 ರೂ. ಹಾಗೂ ಸ್ಕಿನ್ ಲೆಸ್ ಚಿಕನ್‍ಗೆ 180ರೂ. ನಿಗದಿ ಮಾಡಲಾಗಿದೆ. ಒಂದು ಕೆಜಿ ಮಟನ್‍ಗೆ ಗರಿಷ್ಠ 700 ರೂ. ನಿಗದಿ ಮಾಡಲಾಗಿದೆ. ಇದನ್ನು ಮೀರಿ ಬೆಲೆಯಲ್ಲಿ ಹೆಚ್ಚಳ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟನೆ ಮೂಲಕ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News