ದುಬೈ ಪೊಲೀಸರ ಸಹಭಾಗಿತ್ವದಲ್ಲಿ ಕೆಸಿಎಫ್ ಸ್ವಯಂಸೇವಕರ ತಂಡ

Update: 2020-04-20 05:54 GMT

ದುಬೈ, ಎ.20: ಕೊರೋನ ವೈರಸ್ ಸೋಂಕು ಗಲ್ಫ್ ರಾಷ್ಟ್ರಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಇಲ್ಲಿನ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ. ದುಬೈ ಸರಕಾರದ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಐಸಿಎಫ್ ಮತ್ತು ಕೆಸಿಎಫ್ ಕಾರ್ಯಕರ್ತರು ಕೈಜೋಡಿಸಲಿದ್ದಾರೆ ಎಂದು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ತಿಳಿಸಿದ್ದಾರೆ.

ದುಬೈ ಮರ್ಕಝ್ ಕೇಂದ್ರಿಕರಿಸಿ ದುಬೈ ಪೊಲೀಸರೊಂದಿಗೆ ಸಹಕಾರ ನೀಡುವುದಕ್ಕಾಗಿ ಐಸಿಎಫ್ ಮತ್ತು ಕೆಸಿಎಫ್ ಸ್ವಯಂ ಸೇವಕರಿಗೆ ದುಬೈ ಪೊಲೀಸರು ತರಬೇತಿ ನೀಡಿದ್ದಾರೆ. ಯುಎಇ ಘೋಷಿಸಿದ ಲಾಕ್ಡೌನ್ ಮತ್ತು ಆರೋಗ್ಯ ಇಲಾಖೆಯ ಎಲ್ಲ ಮಾಹಿತಿಗಳನ್ನು ಜನರಿಗೆ ತಲುಪಿಸಲು ಹಾಗೂ ಜಾಗೃತಿಗೊಳಿಸಲು ಕೆಸಿಎಫ್ ಕಾರ್ಯಕರ್ತರು ಸಹಕರಿಸಲಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ.

ಕೋವಿಡ್ ಜಾಗೃತಿಗೆ ಸಂಬಂಧಿಸಿ ದುಬೈ ಪೊಲೀಸರು ತರಬೇತಿ ನೀಡಿ ಅಧಿಕೃತ ಐಡೆಂಟಿಟಿ ಕಾರ್ಡ್ ಹಾಗೂ ಜಾಕೆಟ್ ಒದಗಿಸಿದ್ದಾರೆ. ದುಬೈ ಮುರಕ್ಕಾಬಾದ್ ಪೊಲೀಸ್ ವ್ಯಾಪ್ತಿಯಲ್ಲಿ ಕೆಸಿಎಫ್ ಸ್ವಯಂಸೇವಕರು ಜಾಗೃತಿ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News