ಕೊರೋನ ವಿರುದ್ಧದ ಹೋರಾಟ: ಪ್ರಧಾನಿ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಲ್ ಗೇಟ್ಸ್

Update: 2020-04-22 16:07 GMT

ಹೊಸದಿಲ್ಲಿ: ಕೊರೋನ ವೈರಸ್ ಬಿಕ್ಕಟ್ಟನ್ನು ಭಾರತದಲ್ಲಿ ನಿಭಾಯಿಸುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೈಕ್ರೊಸಾಫ್ಟ್ ಸಹಸ್ಥಾಪಕ ಬಿಲ್ ಗೇಟ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಭಾರತದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ತಗ್ಗಿಸಲು ನೀವು ಮತ್ತು ನಿಮ್ಮ ಸರಕಾರ ಕೈಗೊಂಡ ನಿರ್ಧಾರಗಳು ಮತ್ತು ನಿಮ್ಮ ನಾಯಕತ್ವವನ್ನು ನಾವು ಪ್ರಶಂಸಿಸುತ್ತೇವೆ. ದೇಶಾದ್ಯಂತ ಲಾಕ್ ಡೌನ್, ಐಸೊಲೇಶನ್ ಗಾಗಿ ಹಾಟ್ ಸ್ಪಾಟ್ ಗಳ ಗುರುತಿಸುವಿಕೆ, ಕ್ವಾರಂಟೈನ್, ಆರೈಕೆಯ ಕ್ರಮಗಳು ಪ್ರಶಂಸನೀಯ” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ನಿಮ್ಮ ಸರಕಾರವು ಅದರ ಡಿಜಿಟಲ್ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿರುವುದರ ಬಗ್ಗೆ ಮತ್ತು ಕೊರೋನ ವೈರಸ್ ಟ್ರ್ಯಾಕಿಂಗ್ ಗೆ ಆರೋಗ್ಯ ಸೇತು ಆ್ಯಪ್ ಹೊರತಂದದ್ದಕ್ಕಾಗಿ ನಾವು ಸಂತಸಗೊಂಡಿದ್ದೇವೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News