×
Ad

ಆನ್‍ಲೈನ್ ದೇಣಿಗೆ ನೀಡಿ ಮೋಸ ಹೋಗಬೇಡಿ: ರಾಜ್ಯ ಪೊಲೀಸ್ ಮಹಾನಿರ್ದೇಶಕರ ಎಚ್ಚರಿಕೆ

Update: 2020-04-24 23:44 IST
ಪ್ರವೀಣ್ ಸೂದ್

ಬೆಂಗಳೂರು, ಎ.24: ಕೊರೋನ ಸೋಂಕು ಸಂಬಂಧ ಆನ್‍ಲೈನ್ ಮೂಲಕ ದೇಣಿಗೆ ನೀಡುವವರು ಒಮ್ಮೆ ಪರಿಶೀಲನೆ ನಡೆಸಿ, ಎಚ್ಚರ ವಹಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಶುಕ್ರವಾರ ಈ ಕುರಿತು ಟ್ವಿಟ್ ಮಾಡಿರುವ ಅವರು, ದೇಣಿಗೆ ನೀಡಲು ಬಯಸುವವರು ಸಾಮಾಜಿಕ ಜಾಲತಾಣದಲ್ಲಿ ಸಿಗುವ ಲಿಂಕ್ ಅಥವಾ ಖಾತೆಗೆ ಹಣ ವರ್ಗಾವಣೆ ಮಾಡಬೇಡಿ. ಪಿಎಂ ಕೇರ್ ಅಥವಾ ಸಿಎಂ ಪರಿಹಾರ ನಿಧಿ ಸರಿಯಾದ ಆಯ್ಕೆ ಎಂದು ತಿಳಿಸಿದ್ದಾರೆ.

ಅಲ್ಲದೇ ವೈಯಕ್ತಿಕವಾಗಿ ತಿಳಿದಿರುವ ಸಂಸ್ಥೆಗಳಿಗೆ ದೇಣಿಗೆ ನೀಡಿ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಾಕುವ ಪೋಸ್ಟ್ ಗೆ ತಕ್ಷಣ ದೇಣಿಗೆ ನೀಡಿ ಮೋಸದ ಜಾಲಕ್ಕೆ ಬಲಿಯಾಗಬೇಡಿ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News