ನಿಧಿ ಸಂಗ್ರಹಕ್ಕೆ ಟೆಸ್ಟ್ ಶರ್ಟ್, ಬ್ಯಾಟ್ ಹರಾಜಿಗಿಡಲು ಆ್ಯಂಡರ್ಸನ್ ನಿರ್ಧಾರ

Update: 2020-04-26 06:56 GMT

ಹೊಸದಿಲ್ಲಿ: ಕೊರೋನ ವೈರಸ್ ಪರಿಹಾರ ನಿಧಿಗೆ ಹಣ ಸಂಗ್ರಹಕ್ಕೆ ಕೊನೆಯ ಟೆಸ್ಟ್ ಪಂದ್ಯದಲ್ಲಿ ತಾನು ಬಳಸಿರುವ ಹಸ್ತಾಕ್ಷರವಿರುವ ಶರ್ಟ್ ಹಾಗೂ ಕ್ರಿಕೆಟ್ ಬ್ಯಾಟ್‌ನ್ನು ಹರಾಜಿಗಿಡುತ್ತೇನೆ ಎಂದು ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಘೋಷಿಸಿದ್ದಾರೆ.

37ರ ಹರೆಯದ ಆ್ಯಂಡರ್ಸನ್ ಈ ವರ್ಷದ ಜನವರಿಯಲ್ಲಿ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಆ್ಯಂಡರ್ಸನ್ 7 ವಿಕೆಟ್‌ಗಳನ್ನು ಉರುಳಿಸಿದ್ದು, ಇಂಗ್ಲೆಂಡ್ 189 ರನ್‌ಗಳ ಅಂತರದಿಂದ ಜಯಶಾಲಿಯಾಗಿತ್ತು.

‘ಗೋ ವೆಲ್ ಫಂಡ್’ಗೆ ನಾವು ಹರಾಜು ಪ್ರಕ್ರಿಯೆ ನಡೆಸುತ್ತಿದ್ದು, ಕೇಪ್‌ಟೌನ್‌ನಲ್ಲಿ ನಾನು ಆಡಿದ್ದ ಕೊನೆಯ ಟೆಸ್ಟ್ ಪಂದ್ಯದ ನನ್ನ ಶರ್ಟ್,ಸ್ಟಂಪ್ ಹಾಗೂ ಬ್ಯಾಟ್‌ನ್ನು ಹರಾಜಿಗಿಡುವೆ. ಎಲ್ಲ ವಸ್ತುಗಳ ಮೇಲೆ ನನ್ನ ಹಸ್ತಾಕ್ಷರವಿದೆ ಎಂದು ಆ್ಯಂಡರ್ಸನ್ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 600 ವಿಕೆಟ್ ಪೂರೈಸಲು ಆ್ಯಂಡರ್ಸನ್‌ಗೆ ಕೇವಲ 16 ವಿಕೆಟ್‌ಗಳ ಕೊರತೆ ಎದುರಾಗಿತ್ತು. ಅವರು 151 ಟೆಸ್ಟ್‌ಗಳಲ್ಲಿ 584 ವಿಕೆಟ್‌ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News