×
Ad

​ಮುಟ್ಟುಗೋಲು ಹಾಕಿದ್ದ ವಾಹನ ಹಿಂದಿರುಗಿಸುವ ಪ್ರಕ್ರಿಯೆಗೆ ಮೇ 1ರಿಂದ ಚಾಲನೆ: ಬೆಂಗಳೂರು ನಗರ ಪೊಲೀಸ್ ಆಯುಕ್ತ

Update: 2020-04-30 10:29 IST

ಬೆಂಗಳೂರು, ಎ.30: ಕೊರೋನ ಹಿನ್ನೆಲೆಯಲ್ಲಿ ಜಾರಿಗೊಳಿಸಿದ್ದ ಲಾಕ್‌ಡೌನ್ ಅನ್ನು ಉಲ್ಲಂಘಿಸಿ ವಾಹನ ಚಲಾಯಿಸಿದ ಆರೋಪದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ವಾಹನಗಳನ್ನು ವಾಪಸ್ ನೀಡುವ ಪ್ರಕ್ರಿಯೆಗೆ ಮೇ 1ರಿಂದ ಚಾಲನೆ ನೀಡಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಮೊದಲು ಮುಟ್ಟುಗೋಲು ಹಾಕಲಾಗಿದ್ದ ವಾಹನಗಳನ್ನು ಮೊದಲ ಆದ್ಯತೆಯ ಮೇಲೆ ದಾಖಲೆಪತ್ರಗಳನ್ನು ಪರಿಶೀಲಿಸಿ ವಾಪಸ್ ನೀಡಲಾಗುವುದು. ಮುಖ್ಯಮಂತ್ರಿ ಮತ್ತು ಗೃಹಸಚಿವರು ಇದಕ್ಕೆ ಅನುಮೋದನೆ ನೀಡಿದ್ದಾರೆ ಎಂದವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News