ಹಣ ಕಟ್ಟಿಕೊಂಡು ಆನ್ ಲೈನ್ ಜೂಜಾಟ: ಮೂವರು ಸಿಸಿಬಿ ಬಲೆಗೆ
Update: 2020-04-30 21:57 IST
ಬೆಂಗಳೂರು, ಎ.30: ಹಣ ಪಣವಾಗಿ ಕಟ್ಟಿಕೊಂಡು ಆನ್‍ಲೈನ್ ಮೂಲಕ ಪೋಕರ್ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಎರಡು ಮೊಬೈಲ್, 1700 ರೂ. ನಗದು ಜಪ್ತಿ ಮಾಡಿದ್ದಾರೆ.
ನಗರದ ನಿವಾಸಿಗಳಾದ ಮುನಿರಾಜು (26), ಶಂಕರಪ್ಪ(46) ಮತ್ತು ಮುಹಮ್ಮದ್ ಜಾಬೀರ್(46) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಹೆಣ್ಣೂರು ಮುಖ್ಯರಸ್ತೆ ಲಿಂಗರಾಜಪುರ ಬಸ್ ನಿಲ್ದಾಣದ ಬಳಿ ಮೂವರು ಮೊಬೈಲ್ ಮೂಲಕ ಜೂಜಾಟ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸರರು ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.