ರಾಜ್ಯದಲ್ಲಿ ಇಂದು 11 ಹೊಸ ಕೊರೋನ ಸೋಂಕು ಪ್ರಕರಣ ದೃಢ
Update: 2020-05-01 12:56 IST
ಬೆಂಗಳೂರು : ರಾಜ್ಯದಾದ್ಯಂತ ಇಂದು ಒಟ್ಟು 11 ಹೊಸ ಕೊರೋನ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಈ ಪೈಕಿ 3 ಮಂಡ್ಯ, ಒಂದು ಕೆ.ಆರ್. ಪೇಟೆ, 4 ಮಳವಳ್ಳಿ, 3 ಬೆಳಗಾವಿಯಿಂದ ವರದಿಯಾಗಿವೆ.
ಶುಕ್ರವಾರ ಬೆಳಗ್ಗಿನ ವರೆಗೆ ರಾಜ್ಯದಾದ್ಯಂತ ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.