ಬೆಂಗಳೂರು: ಮಾಸ್ಕ್ ಧರಿಸದೆ ಓಡಾಟ; 51 ಸಾವಿರ ರೂ. ದಂಡ ವಸೂಲಿ

Update: 2020-05-02 18:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 2: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೇ ಓಡಾಟ ನಡಸಿದ ನಾಗರಿಕರಿಂದ ಬಿಬಿಎಂಪಿ ಸುಮಾರು 51,700 ರೂ. ದಂಡ ವಸೂಲಿ ಮಾಡಿದೆ.

ಕೋವಿಡ್-19 ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ನಾಗರಿಕರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ ಓಡಾಟ ನಡೆಸಬೇಕು ಎಂದು ಬಿಬಿಎಂಪಿ ಎ.30ರಂದು ಸೂಚಿಸಿತ್ತು. ಆದರೂ ಹಲವು ನಾಗರಿಕರು ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸಿದ ಪರಿಣಾಮ ಪಾಲಿಕೆಯ ಮಾರ್ಷಲ್‍ಗಳು ಅವರಿಗೆ ದಂಡ ವಿಧಿಸಿದ್ದಾರೆ.

ಎ.30ರಿಂದ ಮೇ 2ರವರೆಗೆ ಬಿಬಿಎಂಪಿ ವ್ಯಾಪ್ತಿಯ ಯಲಹಂಕ ವಲಯ ಹೊರತುಪಡಿಸಿ ಉಳಿದ ಏಳು ವಲಯಗಳಲ್ಲಿ ಮಾಸ್ಕ್ ಧರಿಸದ 86 ವ್ಯಕ್ತಿಗಳಿಂದ ಒಟ್ಟು 51,700 ರೂ. ದಂಡವನ್ನು ಮಾರ್ಷಲ್‍ಗಳು ವಸೂಲಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News