×
Ad

ಕಾರ್ಮಿಕರ ವೇತನ ಕಡಿತ, ಉದ್ಯೋಗದಿಂದ ವಜಾ ಮಾಡದಂತೆ ಕ್ರಮ: ಸರಕಾರದಿಂದ ಟಾಸ್ಕ್ ಫೋರ್ಸ್ ರಚನೆ

Update: 2020-05-02 23:42 IST

ಬೆಂಗಳೂರು, ಮೇ 2: ಕೊರೋನ ವೈರಸ್ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್ ಸಂದರ್ಭದಲ್ಲಿ ಕಾರ್ಮಿಕರ ವೇತನ ಕಡಿತ ಮತ್ತು ಕೆಲಸದಿಂದ ವಜಾಗೊಳಿಸದಂತೆ ಕ್ರಮವಹಿಸಲು ರಾಜ್ಯ ಸರಕಾರ ಕಾರ್ಯಪಡೆ(ಟಾಸ್ಕ್‍ಫೋರ್ಸ್) ರಚನೆ ಮಾಡಿ ಶನಿವಾರ ಆದೇಶ ಹೊರಡಿಸಿದೆ.

ಕಾರ್ಯಪಡೆಯ ಅಧ್ಯಕ್ಷರನ್ನಾಗಿ ಕಾರ್ಮಿಕ ಇಲಾಖೆಯ ಹೆಚ್ಚುವರಿ ಆಯುಕ್ತರನ್ನು ನೇಮಿಸಿದ್ದು, ಕ್ರೆಡೈ ಅಧ್ಯಕ್ಷ, ಸಿಐಐ, ಎಫ್‍ಕೆಸಿಸಿಐ, ಕಾಸಿಯಾ, ಪೀಣ್ಯ ಕೈಗಾರಿಕಾ ಅಸೋಸಿಯೇಷನ್, ಎಐಟಿಯುಸಿ, ಐನ್‍ಟಿಯುಸಿ, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಐಸಿಸಿಟಿಯು, ಬಿಎಂಎಸ್, ಎಚ್‍ಎಂಕೆಪಿ ಮತ್ತು ಎಚ್‍ಎಂಎಸ್‍ನ ಪ್ರತಿನಿಧಿಗಳು ಸದಸ್ಯರಾಗಿದ್ದಾರೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರ ಉದ್ಯೋಗದ ಸಮಸ್ಯೆಗಳ ಬಗ್ಗೆ ಈ ಟಾಸ್ಕ್‍ಫೋರ್ಸ್ ಕಡ್ಡಾಯವಾಗಿ ಪ್ರತಿ ಎರಡು ದಿನಗಳಿಗೊಮ್ಮೆ ಸಭೆ ಸೇರಿ ಅಗತ್ಯ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News