ವಾಟ್ಸ್ ಆ್ಯಪ್ ಗ್ರೂಪ್ ಕಾಲಿಂಗ್ ಸದಸ್ಯರ ಮಿತಿ 4ರಿಂದ 8ಕ್ಕೇರಿಕೆ

Update: 2020-05-03 16:08 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 3: ಕೊರೋನ ವೈರಸ್ ಸೋಂಕು ಹರಡುವಿಕೆ ತಡೆಗಟ್ಟಲು ಲಾಕ್‍ಡೌನ್ ಜಾರಿಯಾದ ಹಿನ್ನೆಲೆ ಗುಂಪು ಚರ್ಚೆಗಳನ್ನು ನಡೆಸಲು ಸಮಸ್ಯೆ ಉಂಟಾಗುತ್ತಿರುವ ಕಾರಣ ವ್ಯಾಟ್ಸ್ ಆ್ಯಪ್ ವಿಡಿಯೋ ಕಾಲ್‍ನಲ್ಲಿ ಹೆಚ್ಚು ಸದಸ್ಯರು ಭಾಗವಹಿಸಲು ಅವಕಾಶ ನೀಡಿ ಎಂದು ಬೆಂಗಳೂರಿನ ವಕೀಲ ಅರುಣ್ ಶ್ಯಾಮ್ ಅವರು ಮಾಡಿದ್ದ ಮನವಿಗೆ ವ್ಯಾಟ್ಸ್ ಆ್ಯಪ್ ಸಂಸ್ಥೆ ಸ್ಪಂದಿಸಿದ್ದು, ಗ್ರೂಪ್ ವಿಡಿಯೋ ಕಾಲ್‍ನ ಮಿತಿಯನ್ನು 4 ರಿಂದ 8 ಸದಸ್ಯರಿಗೆ ಹೆಚ್ಚಿಸಿದೆ.

ಎ.22ರಂದು ಟ್ವಿಟ್ವರ್ ಮೂಲಕ ಈ ಬಗ್ಗೆ ಮನವಿ ಮಾಡಿದ್ದ ಅರುಣ್ ಶ್ಯಾಮ್, ಕೊರೋನ ಲಾಕ್‍ಡೌನ್ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಯಮದಿಂದಾಗಿ ಜನರು ಗುಂಪು ಚರ್ಚೆಗಳನ್ನು ನಡೆಸುವ ಬಗ್ಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ, ಪ್ರಸ್ತುತ ವಿಡಿಯೋ ಕಾಲಿಂಗ್‍ಗೆ 4 ಸದಸ್ಯರಿಗೆ ಮಾತ್ರ ಇರುವ ಮಿತಿಯನ್ನು ಹೆಚ್ಚಿಸಿ ಎಂದು ಕೇಳಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿರುವ ವ್ಯಾಟ್ಸ್ ಆ್ಯಪ್, ಗ್ರೂಪ್ ವಿಡಿಯೋ ಕಾಲಿಂಗ್ ಹಾಗೂ ಗ್ರೂಪ್ ವಾಯ್ಸ್ ಕಾಲಿಂಗ್‍ನಲ್ಲಿ ಒಟ್ಟಿಗೆ 8 ಸದಸ್ಯರು ಭಾಗವಹಿಸಲು ಅವಕಾಶ ಮಾಟಿಕೊಟ್ಟಿದ್ದು, ಈ ಸೌಲಭ್ಯ ಪಡೆಯಲು ಆ್ಯಪ್ ಅಪ್ಡೇಟ್ ಮಾಡಿಕೊಳ್ಳುವಂತೆ ಎಲ್ಲ ಗ್ರಾಹಕರಿಗೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News