ಬೆಂಗಳೂರಿನಲ್ಲಿ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಲಾಕ್‍ಡೌನ್ ಸಡಿಲ: ಭಾಸ್ಕರ್ ರಾವ್

Update: 2020-05-03 16:24 GMT

ಬೆಂಗಳೂರು, ಮೇ 3: ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಕೆಲವು ನಿಯಮಗಳನ್ನು ಸಡಿಲಿಕೆ ಮಾಡಲಾಗಿದ್ದು, ಬಿಬಿಎಂಪಿ ಘೋಷಿಸಿರುವ 22 ನಿರ್ಬಂಧಿತ ವಲಯಗಳನ್ನು ಹೊರತುಪಡಿಸಿ ನಗರಾದ್ಯಂತ ಇಂದಿನಿಂದ ಎಲ್ಲ ರೀತಿಯ ಅಂಗಡಿ, ಮಳಿಗೆಗಳನ್ನು ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಮಾತ್ರ ತೆರೆಯಬಹುದೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ಸೋಮವಾರದಿಂದ ನಗರದ ಮುಖ್ಯರಸ್ತೆಗಳು ಎಂದಿನಂತೆ ಬಂದ್ ಇರಲಿವೆ. ಆದರೆ, ಸಂಚಾರಿ ನಿಯಮಗಳನ್ನು ವಾಹನ ಸವಾರರು ಪಾಲಿಸಬೇಕು. ವಾಹನ ಸವಾರರ ಪಾಸ್ ಚೆಕ್ ಮಾಡುವುದಿಲ್ಲ. ಆದರೆ, ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಈ ಹಿಂದಿನ ನಿಯಮ ಮುಂದುವರಿಯಲಿದೆ ಎಂದು ಹೇಳಿದರು.

ಅಗತ್ಯ ವಸ್ತುಗಳ ಪೂರೈಕೆಗಾಗಿ ಸಾರ್ವಜನಿಕರಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6:30ರವರೆಗೂ ಅವಕಾಶ ಕಲ್ಪಿಸಲಾಗಿದ್ದು, ಸಂಜೆ 7 ಗಂಟೆಯಿಂದ ಕರ್ಫ್ಯೂ ಮಾದರಿ ವಾತಾವರಣ ಇರಲಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ಪಾಲಿಸಬೇಕಾದ ನಿಯಮ

* ಮನೆಯಿಂದ ಹೊರಗಡೆ ಬರುವಾಗ ಮಾಸ್ಕ್ ಕಡ್ಡಾಯ

* ಕೆಲಸಕ್ಕೆ ತೆರಳುವ ಐಟಿ, ಬಿಟಿ ಉದ್ಯೋಗಿಗಳು, ಕಾರ್ಮಿಕರು ಆರೋಗ್ಯ ಕಾಪಾಡಿ

* ಕೆಲಸ ನಿಮಿತ್ತ ಹೋಗುವಾಗ ದುಬಾರಿ ಬೆಲೆಬಾಳುವ ವಸ್ತುಗಳನ್ನು ಧರಿಸಬೇಡಿ

* ಅಪರಿಚಿತ ವಾಹನಗಳಲ್ಲಿ ಸಂಚಾರ ಸೂಕ್ತವಲ್ಲ

* ಒಂಟಿಯಾಗಿ ಇರುವ ಮಹಿಳೆಯರ ಬಗ್ಗೆ ಅಕ್ಕ-ಪಕ್ಕದ ಕುಟುಂಬಸ್ಥರು ನಿಗಾವಹಿಸಿ

* ಅಪರಿಚಿತರು ಮನೆ ಬಳಿ ಮಾರಾಟಕ್ಕೆ ಬಂದಾಗ ಮನೆಯ ಒಳಗಡೆ ಕರೆದೊಯ್ಯುವ ಸಾಹಸಕ್ಕೆ ಕೈ ಹಾಕಬೇಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News