ಲಾಕ್‍ಡೌನ್ ನಿಯಮ ಉಲ್ಲಂಘನೆ: ಒಂದೇ ದಿನ 18.61 ಲಕ್ಷ ರೂ. ದಂಡ ವಸೂಲಿ
Update: 2020-05-03 23:04 IST
ಬೆಂಗಳೂರು, ಮೇ 3: ಲಾಕ್‍ಡೌನ್ ನಿಯಮ ಉಲ್ಲಂಘನೆ ಆರೋಪದಡಿ ಜಪ್ತಿ ಮಾಡಲಾಗಿದ್ದ ವಾಹನಗಳನ್ನು ಪೊಲೀಸರು ವಾಪಸ್ಸು ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಒಂದೇ ದಿನದಲ್ಲಿ 2,024 ವಾಹನಗಳ ಮೇಲೆ 5,287 ಪ್ರಕರಣ ದಾಖಲಿಸಿ 18.61 ಲಕ್ಷ ರೂ. ದಂಡ ಸಂಗ್ರಹ ಮಾಡಲಾಗಿದೆ.
ಅನಗತ್ಯ ವಾಹನ ಸಂಚಾರ ಆರೋಪ ಹಿನ್ನೆಲೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ವಾಹನ ಸವಾರರಿಗೆ ವಾಹನಗಳನ್ನು ನೀಡುವಂತೆ ಸರಕಾರ ಆದೇಶ ನೀಡಿದ ಹಿನ್ನೆಲೆ ಹೈಕೋರ್ಟ್ ಆದೇಶದ ಮೇರೆಗೆ ದಂಡ ಸಂಗ್ರಹಿಸಿಕೊಂಡು ವಾಹನ ಬಿಡುಗಡೆ ಮಾಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.