ಬೆಂಗಳೂರು: ಚೇತನ ಸಂಸ್ಥೆಯಿಂದ ಕಿಟ್ ವಿತರಣೆ
ಬೆಂಗಳೂರು, ಮೇ 6: ಲಾಕ್‍ಡೌನ್ ಸಂದರ್ಭದಲ್ಲಿ ಚೇತನಾ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ ವತಿಯಿಂದ ದುಡಿಮೆಗಾರರಿಗೆ ಮತ್ತು ದಿನಗೂಲಿ ವರ್ಗದವರಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು.
ಜಾಲ ಹೋಬಳಿಯ ಕುದುರೆಗೆರೆ ಗ್ರಾಮದ ಸುಮಾರು 280 ಮನೆಗಳಿಗೆ ಅಕ್ಕಿ, ಸಕ್ಕರೆ, ಎಣ್ಣೆ, ಬೇಳೆ, ಗೋಧಿ ಹಿಟ್ಟು, ಸಾಂಬಾರ ಪುಡಿ, ಮಾಸ್ಕ್, ತರಕಾರಿಯನ್ನೊಳಗೊಂಡ ಕಿಟ್‍ಗಳನ್ನು ಶಾಸಕರಾದ ಕೃಷ್ಣಬೈರೇಗೌಡ ಅವರ ನೇತೃತ್ವದಲ್ಲಿ ಪ್ರತಿಯೊಬ್ಬರಿಗೂ ನೀಡಲಾಯಿತು.
'ಲಾಕ್ ಡೌನ್ ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ದುಡಿಮೆಗಾರರು ಮತ್ತು ದಿನಗೂಲಿ ವರ್ಗದವರು ಹಸಿವಿನಿಂದ ನರಳಬಾರದು, ಅವರನ್ನು ಮಾನಸಿಕವಾಗಿ ಮುಂದಿನ ಬದುಕಿಗೆ ಸಜ್ಜುಗೊಳಿಸಬೇಕು’ ಎಂದು ರಸಶ್ರೀ ಡೆವಲಪರ್ಸ್‍ನ ನಿರ್ದೇಶಕರಾದ ಆಂಜನೇಯಲು ಪ್ರತಿಪಾಟಿ ಆಶ್ವಾಸನೆ ನೀಡಿದರು.
'ಲಾಕ್ ಡೌನ್ ಆದಾಗಿನಿಂದ ನಮ್ಮ ಚೇತನಾ ಸಾಂಸ್ಕೃತಿಕ ಸಂಸ್ಥೆ ಯಾವುದೇ ರಾಜಕೀಯ ದುರುದ್ದೇಶವಿಲ್ಲದೆ ನೊಂದವರಿಗೆ ಶ್ರಮಿಸಿದೆ. ಜಾಲ ಹೋಬಳಿಯ ಕುದುರೆಗೆರೆ ಗ್ರಾಮದ ಸುಮಾರು 280 ಮನೆಗಳಿಗೆ ಅಕ್ಕಿ, ಸಕ್ಕರೆ, ಎಣ್ಣೆ, ಬೇಳೆ, ಗೋಧಿ ಹಿಟ್ಟು, ಸಾಂಬಾರ ಪುಡಿ ಮತ್ತು ತರಕಾರಿಯನ್ನೊಳಗೊಂಡ ಕಿಟ್‍ಗಳನ್ನು ಮತ್ತು ಪ್ರತಿಯೊಬ್ಬರಿಗೂ ಮಾಸ್ಕ್ ನೀಡಿದ್ದೇವೆ. ಮತ್ತು ಮುಂದೆಯೂ ಅವರ ನೆರವಿಗೆ ಇರುತ್ತೇವೆ, ಅವರು ಧೃತಿಗೆಡುವುದು ಬೇಡ’ ಎಂದು ಚೇತನಾ ಸಂಸ್ಥೆಯ ಅಧ್ಯಕ್ಷರಾದ ಕೃಷ್ಣಮೂರ್ತಿ ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾದ ರಸಶ್ರೀ ಡೆವಲಪರ್ಸ್‍ನ ಆಂಜನೇಯಲು ಪ್ರತಿಪಾಟಿ, ಬೆಟ್ಟಹಲಸೂರು ಗ್ರಾಮ ಪಂಚಾಯ್ತಿ ಸದಸ್ಯರಾದ ಅಣ್ಣೇಗೌಡ ಮತ್ತು ನರಸೇಗೌಡ ಉಪಸ್ಥಿತರಿದ್ದರು.