ಹೂ ಬೆಳೆಗಾರರಿಗೆ ನೀಡಿರುವ ಪರಿಹಾರ ಧನ ಅವೈಜ್ಞಾನಿಕ: ಕೋಡಿಹಳ್ಳಿ ಚಂದ್ರಶೇಖರ್

Update: 2020-05-06 17:48 GMT

ಬೆಂಗಳೂರು, ಮೇ 6: ರಾಜ್ಯ ಸರಕಾರ ಲಾಕ್‍ಡೌನ್‍ನಿಂದ ನಷ್ಟದಲ್ಲಿರುವ ಹೂ ಬೆಳೆಗಾಗರರಿಗೆ ಹೆಕ್ಟೇರ್ ಗೆ 25 ಸಾವಿರ ರೂ. ಸಹಾಯಧನ ಘೋಷಿಸಿರುವುದು ಅವೈಜ್ಞಾನಿಕವಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಒಂದು ಎಕರೆಯಲ್ಲಿ ಹೂ ಬೆಳೆಯಲು 25 ಸಾವಿರ ರೂ. ವೆಚ್ಚ ತಗುಲುತ್ತದೆ. ಅಲ್ಲದೇ ಒಂದು ಲಕ್ಷ ರೂ. ನಷ್ಟವಾಗ್ತಿದೆ. ಹೀಗಾಗಿ ಒಂದು ಹೆಕ್ಟೇರ್ ಗೆ 25 ಸಾವಿರ ರೂ. ಘೋಷಣೆ ಮಾಡಿರುವುದು ಅವೈಜ್ಞಾನಿಕವಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಸರಕಾರ ರೈತರನ್ನು ಸಮಾಧಾನ ಮಾಡುವ ಕೆಲಸ ಮಾಡುತ್ತಿದೆ. ರೈತರಿಗೆ ಇದು ಹೆಚ್ಚು ನೆರವು ನೀಡಲು ಮಾತ್ರ ಮುಂದಾಗಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News