ಇಬ್ಬರು ಬಿಎಸ್‌ಎಫ್ ಯೋಧರು ಕೊರೋನ ವೈರಸ್ ಗೆ ಬಲಿ

Update: 2020-05-07 17:46 GMT
file photo

ಹೊಸದಿಲ್ಲಿ,ಮೇ 5: ಭೀಕರ ಸಾಂಕ್ರಾಮಿಕ ರೋಗ ಕೊರೋನ ವೈರಸ್‌ಗೆ ಗಡಿಭದ್ರತಾಪಡೆ (ಬಿಎಸ್‌ಎಫ್)ಯ ಇಬ್ಬರು ಯೋಧರು ಬಲಿಯಾಗಿದ್ದಾರೆ.

ಸೋಂಕಿನಿಂದ ಮೃತಪಟ್ಟ ಯೋಧರ ಪೈಕಿ ಒಬ್ಬಾತ ದಿಲ್ಲಿಯ ಸಫ್ದರ್‌ ಜಂಗ್ ಆಸ್ಪತ್ರೆಯಲ್ಲಿ ಸೋಮವಾರ ಕೊನೆಯುಸಿರೆಳೆದಿರುವುದಾಗಿ ಬಿಎಸ್‌ಎಫ್ ಮೂಲಗಳು ತಿಳಿಸಿವೆ. ಇನ್ನೋರ್ವ ಮೃತ ಯೋಧನ ವಿವರಗಳನ್ನು ಇನ್ನಷ್ಟೇ ಬಹಿರಂಗಪಡಿಸಬೇಕಿದೆ.

ಈ ಮಧ್ಯೆ ಗುರುವಾರ 41 ಮಂದಿ ಬಿಎಸ್‌ಎಫ್ ಯೋಧರಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತ ಬಿಎಸ್‌ಎಫ್ ಯೋಧರ ಒಟ್ಟು ಸಂಖ್ಯೆ 191ಕ್ಕೇರಿದೆ.

ಸೋಂಕಿಗೆ ಒಳಗಾದ ಹೆಚ್ಚಿನ ಯೋಧರು ಯಾವುದೇ ರೋಗಲಕ್ಷಣಗಳನ್ನು ಪ್ರದರ್ಶಿಸಿಲ್ಲವೆಂದು ಬಿಎಸ್‌ಎಫ್ ಇಂದು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ. ಸೋಂಕು ದೃಢಪಟ್ಟ ಯೋಧರ ಜೊತೆ ಸಂಪರ್ಕಕ್ಕೆ ಬಂದಿದ್ದ ಎಲ್ಲಾ ವ್ಯಕ್ತಿಗಳನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ಅದು ಹೇಳಿದೆ.

ಕೋವಿಡ್-19 ಸೋಂಕಿನಿಂದ ಮೃತಪಟ್ಚ ಯೋಧರ ಕುಟುಂಬಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ವ್ಯಕ್ತಪಡಿಸಿದ್ದಾರೆ. ಕೊರೋನ ಹಾವಳಿ ನಿಭಾ ಯಿಸುವ ಸಂದರ್ಭದಲ್ಲಿ ಪೊಲೀಸರಿಗೆ ನೆರವು ನೀಡಿದ್ದ ಸಂದರ್ಭದಲ್ಲಿ ತನ್ನ 41 ಯೋಧರು ಸೋಂಕಿಗೆ ಒಳಗಾಗಿದ್ದರು ಎಂದು ಬಿಎಸ್‌ಎಫ್ ತಿಳಿಸಿದೆ. ಬಿಎಸ್‌ಎಫ್ ಯೋಧರು ಕೊರೋನ ಸೋಂಕಿಗೆ ಬಲಿಯಾಗಿರುವ ಮೊದಲ ಪ್ರಕರಣ ಇದಾಗಿದೆ.

ಎಪ್ರಿಲ್ 28ರಂದು ದಿಲ್ಲಿಯ ಸಫ್ಧರ್‌ಜಂಗ್ ಆಸ್ಪತ್ರೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿರ್‌ಪಿಎಫ್) 55 ವರ್ಷದ ಯೋಧನೊಬ್ಬ ಕೊರೋನಾ ಸೋಂಕಿನಿಂದ ಅಸುನೀಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News