ಬೆಂಗಳೂರು: ಹೂವಿನ ಅಲಂಕಾರ ಅಂಗಡಿಗೆ ಬೆಂಕಿ; ಲಕ್ಷಾಂತರ ರೂ. ನಷ್ಟ
Update: 2020-05-09 18:07 IST
ಬೆಂಗಳೂರು, ಮೇ 9: ಇಲ್ಲಿನ ಹನುಮಂತನಗರದ ಪೈಪ್‍ಲೈನ್ ರಸ್ತೆಯ ಹೂವಿನ ಅಲಂಕಾರ ಮಾಡುವ ಅಂಗಡಿಗೆ ಶನಿವಾರ ಮುಂಜಾನೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ನಷ್ಟ ಸಂಭವಿಸಿದೆ.
ಪೈಪ್‍ಲೈನ್ ರಸ್ತೆಯ ಹೂವಿನ ಅಲಂಕಾರ ಮಾಡುವ ಅಣ್ಣಮ್ಮ ಫ್ಲವರ್ ಡೆಕೋರೇಷನ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಆಕಸ್ಮಿಕ ಬೆಂಕಿ ತಗುಲಿದೆ. ಕೆಲ ಹೊತ್ತಿನಲ್ಲಿ ಇಡೀ ಅಂಗಡಿಯನ್ನು ಬೆಂಕಿ ಆವರಿಸಿ ದಟ್ಟ ಹೊಗೆ ಹೊರ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು.
ಮೂರು ವಾಹನಗಳು ಸತತ 3 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿವೆ. ಅಂಗಡಿಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.