×
Ad

ಮೃತದೇಹ ಪಡೆದುಕೊಳ್ಳದ ಕುಟುಂಬ: ಮಾನಸಿಕ ಅಸ್ವಸ್ಥ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ಪೊಲೀಸರು

Update: 2020-05-09 19:13 IST

ಬೆಂಗಳೂರು: ಮೈಸೂರು ಸಮೀಪದ ಚಾಮರಾಜನಗರ ಜಿಲ್ಲೆಯಲ್ಲಿ ನಾಲ್ಕು ದಿನಗಳ ಹಿಂದೆ ಆನೆಯ ತುಳಿತದಿಂದ ಮೃತಪಟ್ಟ 44 ವರ್ಷದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನ ಮೃತದೇಹವನ್ನು ಆತನ ಕುಟುಂಬದವರು ಪಡೆದುಕೊಳ್ಳಲು ನಿರಾಕರಿಸಿದ  ನಂತರ ಮೂವರು ಪೊಲೀಸರೇ ಆತನ ಅಂತ್ಯಕ್ರಿಯೆಯನ್ನು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಎಎಸ್‍ಐ ಮಾದೇಗೌಡ ಹಾಗೂ ಇತರ ಇಬ್ಬರು ಪೊಲೀಸರು ಆ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಚಾಮರಾಜನಗರದ ಹಿಂದು ರುದ್ರಭೂಮಿಯಲ್ಲಿ ನೆರವೇರಿಸಿದರು.

ಮಾದೇಗೌಡ ಅವರು ಜೆಸಿಬಿಯನ್ನು ಅಲ್ಲಿಗೆ ತರಿಸಿ ಅಲ್ಲಿ ಒಂದು ಗುಂಡಿ ತೋಡುವ ಕೆಲಸವನ್ನು ಮಾಡಿಸಿದರು. ನಂತರ ಇಬ್ಬರು ಪೊಲೀಸರ ಸಹಾಯದಿಂದ ಮೃತದೇಹದ ಅಂತ್ಯಕ್ರಿಯೆ ನಡೆಸಿದರು. ಸಮಾಧಿಯ ಮುಂದೆ ಮಾದೇಗೌಡ ಪ್ರಾರ್ಥಿಸುತ್ತಿರುವ ಚಿತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News