ಉದ್ಯೋಗಕ್ಕಾಗಿ ಮಾಹಿತಿ ತುಂಬಿಸಲು ಹೋಗಿ 75 ಸಾವಿರ ರೂ. ಕಳೆದುಕೊಂಡ ಯುವತಿ

Update: 2020-05-09 17:56 GMT

ಬೆಂಗಳೂರು, ಮೇ 9: ಉದ್ಯೋಗ ಮಾಹಿತಿಗಾಗಿ ಹೆಸರು ನೋಂದಾಯಿಸಿಕೊಳ್ಳಲು ಮುಂದಾದ ಯುವತಿ, ಸೈಬರ್ ಕಳ್ಳರಿಂದ ವಂಚನೆಗೊಳಗಾಗಿರುವ ಆರೋಪ ಕೇಳಿಬಂದಿದೆ.

ಮೇ 6 ರಂದು ಯುವತಿಗೆ ಅನಾಮಿಕನೋರ್ವ ಕರೆ ಮಾಡಿ, ಉದ್ಯೋಗ ಮಾಹಿತಿಗಾಗಿ ‘ಮಾನ್‍ಸ್ಟಾರ್ ಜಾಬ್ಸ್’ ವೆಬ್‍ಸೈಟ್‍ನಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚಿಸಿ, ಇದಕ್ಕೆ 10 ರೂ. ಪಾವತಿಸಬೇಕು ಎಂದಿದ್ದ.

ಆತನ ಮಾತನ್ನು ನಂಬಿದ ಯುವತಿ ಹೆಸರು ನೋಂದಾಯಿಸಿಕೊಳ್ಳಲು ಮುಂದಾಗಿದ್ದಾರೆ. ವೆಬ್‍ಸೈಟ್‍ನಲ್ಲಿ ನೆಟ್‍ಬ್ಯಾಂಕಿಂಗ್ ಮೂಲಕ 10 ರೂ. ಪಾವತಿಸಿದ್ದರು. ಕೆಲ ನಿಮಿಷಗಳ ಬಳಿಕ ಎರಡು ಬ್ಯಾಂಕ್ ಖಾತೆಗಳಿಂದ 75 ಸಾವಿರ ರೂ. ಕಡಿತವಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ಯುವತಿ ದೂರು ಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News