ಬೆಂಗಳೂರಿನಲ್ಲಿ 2 ಹೊಸ ಕೊರೋನ ಪ್ರಕರಣ

Update: 2020-05-13 17:25 GMT

ಬೆಂಗಳೂರು, ಮೇ 13: ನಗರದಲ್ಲಿ ಬುಧವಾರ ಹೊಸದಾಗಿ ಎರಡು ಪ್ರಕರಣ ಪತ್ತೆಯಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿ ಹಾಗೂ ಲಂಡನ್‍ನಿಂದ ಬಂದ ಒಬ್ಬ ಪ್ರಯಾಣಿಕರಲ್ಲಿ ಸೋಂಕು ದೃಢಪಟ್ಟಿದೆ.

ವಿದೇಶದಿಂದ ಆಗಮಿಸಿದ ಪ್ರಯಾಣಿಕರಿಂದಲೇ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಮಾ.8ರಿಂದ ಆರಂಭವಾದ ಲಂಡನ್‍ನಿಂದ ವಿಶೇಷ ವಿಮಾನದಲ್ಲಿ ಸೋಮವಾರ ನಗರಕ್ಕೆ 326 ಜನರು ಆಗಮಿಸಿದ್ದರು. ಅವರನ್ನು ಹೊಟೇಲ್ ಕ್ವಾರಂಟೈನ್ ಮಾಡಿ ಕೊರೋನ ತಪಾಸಣೆಗೆ ಒಳಪಡಿಸಲಾದ ಅದರಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ. ಇನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಇಲ್ಲಿನ ಎಲ್ಲ ಸಿಬ್ಬಂದಿಗಳು 14 ದಿನ ಸೇವೆ ಮಾಡಿದರೆ, ಮುಂದಿನ 14 ದಿನ ಸ್ವಯಂ ಕ್ವಾರಂಟೈನ್‍ನಲ್ಲಿ ಇರಬೇಕು. ಹೀಗೆ ಸ್ವಯಂ ಕ್ವಾರಂಟೈನ್ ಇದ್ದು, ಚಿಕಿತ್ಸೆಗೆ ಹಾಜರಾಗುವ ಮುನ್ನ ಕೊರೋನ ತಪಾಸಣೆ ಮಾಡಲಾಗಿದೆ.

ನಗರದಲ್ಲಿ ಇಲ್ಲಿಯವರಿಗೆ 187 ಪ್ರಕರಣ ಪತ್ತೆಯಾಗಿದ್ದು, 95 ಜನರು ಗುಣಮುಖರಾಗಿದ್ದು, 81 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಟು ಮಂದಿ ಮರಣ ಹೊಂದಿದ್ದಾರೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 7,961 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ ಒಟ್ಟು 1,191 ಜನರು ಹಾಗೂ  ಸೆಕೆಂಡರಿ ಸಂಪರ್ಕದಲ್ಲಿರುವ 4,903 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ನಗರದ ಕಂಟೈನ್ಮೆಂಟ್ ವಲಯಗಳು: ವಾರ್ಡ್ ನಂ.118- ಸುಧಾಮ ನಗರ, ವಾರ್ಡ್ ನಂ.93- ವಸಂತ ನಗರ, ವಾರ್ಡ್ ನಂ.133- ಹಂಪಿ ನಗರ, ವಾರ್ಡ್ ನಂ.169- ಬೈರಸಂದ್ರ, ವಾರ್ಡ್ ನಂ.37- ಯಶವಂತಪುರ, ವಾರ್ಡ್ ನಂ.138- ಛಲವಾದಿ ಪಾಳ್ಯ, ವಾರ್ಡ್ ನಂ.136- ಜಗಜೀವನ್ ನಗರ, ವಾರ್ಡ್ ನಂ.158- ದೀಪಾಂಜಲಿ ನಗರ, ವಾರ್ಡ್ ನಂ.188- ಬೈಲಕಹಳ್ಳಿ, ವಾರ್ಡ್ ನಂ.84- ಹಗದೂರು, ವಾರ್ಡ್ ನಂ.139-ಕೆ.ಆರ್ ಮಾರ್ಕೆಟ್, ವಾರ್ಡ್ ನಂ.135- ಪಾದರಾಯನಪುರ, ವಾರ್ಡ್ ನಂ.189- ಹೊಂಗಸಂದ್ರ, ವಾರ್ಡ್ ನಂ.192- ಬೆಗೂರು, ವಾರ್ಡ್ ನಂ.176- ಬಿಟಿಎಂ ಲೇಔಟ್, ವಾರ್ಡ್ ನಂ.92- ಶಿವಾಜಿ ನಗರ, ವಾರ್ಡ್ ನಂ.45- ಮಲ್ಲೇಶ್ವರ, ವಾರ್ಡ್ ನಂ.24- ಹೆ.ಬಿ.ಆರ್ ಲೇಔಟ್,  ವಾರ್ಡ್ ನಂ.72- ಹರೋಹಳ್ಳಿ, ವಾರ್ಡ್ ನಂ.190- ಮಂಗಮ್ಮನಪಾಳ್ಯ

ಕೊರೋನ ಮುಚ್ಚಿಟ್ಟ ವೈದ್ಯರ ಮೇಲೆ ಕೇಸ್ ದಾಖಲು
ಕೇಸ್ 911ಗೆ ಕೊರೋನ ಇರುವ ವಿಚಾರ ಮುಚ್ಚಿಟ್ಟಿದ್ದ ವೈದ್ಯರು ಹಾಗೂ ರೋಗಿಯ ಸಂಬಂಧಿಕರ ಮೇಲೆ ಪಾಲಿಕೆಯಿಂದ ಕೇಸ್ ದಾಖಲು ಮಾಡಲಾಗಿದೆ. ಸೋಂಕಿತ ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ, ಸೌಮ್ಯ ಕ್ಲಿನಿಕ್‍ನ ವೈದ್ಯ ಹಾಗೂ ರೋಗಿಯ ಸಹೋದರನ ವಿರುದ್ಧ ಕಾನೂನು ಕ್ರಮಕ್ಕಾಗಿ ಪಾಲಿಕೆಯಿಂದ ಎಪಿಡಮಿಕ್ ಆಕ್ಟ್ ಮೂಲಕ ಕೇಸ್ ಅನ್ನು ಬೊಮ್ಮನಹಳ್ಳಿ ಜಂಟಿ ಆಯುಕ್ತರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News